ಕೊಳ್ಳೇಗಾಲ: ಸಂಸದ ವಿ.ಶ್ರೀನಿವಾಸಪ್ರಸಾದ್ ನಿಧನ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ನಿವಾಸದಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರ ಇಟ್ಟು ಮೊಂಬತ್ತಿ ಬೆಳಗಿ, ಪುಷ್ಪ ನಮನ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಮೌನಚರಣೆ ಮಾಡಿ ಸಂತಾಪ ಸೂಚಿಸಿದರು.
ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಸದಸ್ಯ ಬಸ್ತೀಪುರ ಶಾಂತರಾಜು, ಜಯಮೇರಿ, ರಾಘವೇಂದ್ರ, ಎ.ಪಿ.ಶಂಕರ್, ನಗರಸಭಾ ಮಾಜಿ ಸದಸ್ಯ ಹರ್ಷ, ಕೃಷ್ಣವೇಣಿ, ನರಸಿಂಹನ್, ಮಾಜಿ ಪುರಸಭಾ ಸದಸ್ಯ ಲಿಂಗರಾಜು, ಮುಖಂಡರಾದ ಪಾಪಣ್ಣ, ಖಿಜರ್, ಸೋಮಣ್ಣ, ರಾಜೇಶ್, ಆಟೋ ಶಿವು, ಪ್ರಭುಸ್ವಾಮಿ, ಬಸಂತ್, ಚಿನ್ನಸ್ವಾಮಿ ಮಾಳಿಗೆ, ವಾಚ್ ಕುಮಾರ್, ಸಿಗ್ಬತ್‌ವುಲ್ಲಾ, ಶಿವಮಲ್ಲು, ರಮೇಶ್, ರಾಜೇಂದ್ರ, ಸ್ವಾಮಿ ನಂಜಪ್ಪ, ತಮ್ಮಯ್ಯ, ಇಮ್ರಾನ್, ಆನಂದ್, ದಿಲೀಪ್, ಪಾಪಣ್ಣ ಮತ್ತಿತರಿದ್ದರು.