ಮದ್ದೂರು: ಇಂದಿರಾಗಾಂಧಿ ಪ್ರಧಾನಿಯಾಗಿದ್ದ 1975ರಲ್ಲಿ ಏರಿದ್ದ ತುರ್ತು ಪರಿಸ್ಥಿತಿಯನ್ನು ಸಂವಿಧಾನ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದ್ದು ಅಂದು ಹೋರಾಟ ಮಾಡಿ ಜೈಲು ಸೇರಿದ ಪಕ್ಷದ ಮುಖಂಡರನ್ನು ಅಭಿನಂದಿಸುತ್ತಿರುವುದಾಗಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸಿ.ಕೆ.ಸತೀಶ್ ತಿಳಿಸಿದರು.
ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿದರು. ಜೂ.25ಕ್ಕೆ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಕಳೆದು ಹೋಗಿದು,್ದ ಈ ಕರಾಳ ಕಾಲಘಟ್ಟದ ಸ್ಮರಣಾರ್ಥ ಸಂವಿಧಾನ ಕರಾಳ ದಿನವನ್ನಾಗಿ ಆಚರಿಸುತ್ತಿದ್ದು, ಸರ್ವರಿಗೂ ಮರೆಯಬಾರದ ಪಾಠವನ್ನು ಕಲಿಸಿದೆ ಎಂದರು.
ಸಂವಿಧಾನ ಧಿಕ್ಕರಿಸಿ ತಮ್ಮ ಅಧಿಕಾರದ ಆಸೆಯಿಂದ ದೇಶದೆಲ್ಲೆಡೆ ಕರಾಳ ಸರ್ವಾಧಿಕಾರದ ಮೂಲಕ ತುರ್ತು ಪರಿಸ್ಥಿತಿ ಏರಿದ್ದು ಇಂಧಿರಾಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ. ಇಂದು ಸಂವಿಧಾನದ ಪುಸ್ತಕವನ್ನು ಕೈಯಲ್ಲಿಡಿದು ಸಂವಿಧಾನ ಉಳಿಸಿ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿಗರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ಮುಖಂಡ ಹಾಗೂ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಆದೇಶದ ಮೇರೆಗೆ ತುರ್ತು ಪರಿಸ್ಥಿತಿಯಲ್ಲಿ ಜನಸಂಘದಲ್ಲಿದ್ದು ಹೋರಾಟ ಮಾಡಿದ ಹಲವು ಕಾರ್ಯಕರ್ತರು ಮತ್ತು ಮುಖಂಡರನ್ನು ಗೌರವಿಸಲಾಗುತ್ತಿದೆ ಎಂದರು.
ಅಭಿನಂದನೆ: ಹಿರಿಯ ಬಿಜೆಪಿ ಮುಖಂಡರಾದ ಕೃಷ್ಣಪ್ಪ, ಮಲ್ಲಿಕಾರ್ಜುನಯ್ಯ, ಶಿವಮಲ್ಲಪ್ಪ ಹಾಗೂ ಜಗನ್ನಾಥ ಅವರನ್ನು ತಾಲೂಕು ಬಿಜೆಪಿ ಘಟಕದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಪುರಸಭೆ ಮಾಜಿ ಸದಸ್ಯ ಮ.ನ.ಪ್ರಸನ್ನಕುಮಾರ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್, ಜಿಲ್ಲಾ ಕಾರ್ಯದರ್ಶಿ ರಂಜಿತಾ, ಪದಾಧಿಕಾರಿಗಳಾದ ಶ್ವೇತಾ, ವಾಸು, ವೀರಭದ್ರಸ್ವಾಮಿ, ಸೌಮ್ಯಾ, ಕಾಂತಮಣಿ, ನಾಗೇಂದ್ರ, ರವಿ, ಸುಂದರ್ ಇತರರು ಇದ್ದರು.