ಆಲಮೇಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕಡಣಿ ಶಾಸಿಗಳನ್ನು ಭೈರನಹಟ್ಟಿ ಶ್ರೀಮಠದಲ್ಲಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸನ್ಮಾನಿಸಿದರು. 
ಜಿಲ್ಲೆ

ಕಡಣಿ ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಸಂದ ಗೌರವ

ಕುಳಗೇರಿ ಕ್ರಾಸ್ : ಹಿರಿಯ ಸಾಹಿತಿ ಸಿ.ಕೆ.ಎಚ್. ಕಡಣಿ ಶಾಸ್ತ್ರಿಗಳನ್ನು ಆಲಮೇಲ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯರಾಗಿ ಆಯ್ಕೆ ಮಾಡಿದ್ದು, ಅವರು ಸಲ್ಲಿಸಿದ ಸೇವೆಗೆ ಸಂದ ಗೌರವ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಅಭಿಪ್ರಾಯಪಟ್ಟರು.

ಶ್ರೀಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ, ಮಾತನಾಡಿದ ಶ್ರೀಗಳು, ಸಂಗೀತ, ಸಾಹಿತ್ಯ ಹೀಗೆ ಪ್ರತಿಯೊಂದು ರಂಗದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕ ಸೇವೆ ಮಾಡುತ್ತಿರುವ ಕಡಣಿ ಶಾಸ್ತ್ರಿಯವರಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸಿದರು.

ವಿಭೂತಿ ಮಾಸ ಪತ್ರಿಕೆ ಸಂಪಾದಕ ಅಂದಾನಪ್ಪ ವಿಭೂತಿ, ಬೆಳ್ಳಟ್ಟಿಯ ಕ್ಕೀರೇಶ್ವರ ಶಾಸ್ತ್ರಿಗಳು, ಸಿದ್ದಯ್ಯ ಶಾಸಿಗಳು, ನಾಗಯ್ಯ ಶಾಸಿಗಳು, ಶಾಂತಯ್ಯ ಹಿರೇಮಠ, ವಿಜಯಾನಂದ ಚರಂತಿಮಠ ಉಪಸ್ಥಿತರಿದ್ದರು.