Oplus_0 
ಜಿಲ್ಲೆ

ಪೇಜಾವರ ಶ್ರೀವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗೆ ಗೌರವಾರ್ಪಣೆ

ಚನ್ನರಾಯಪಟ್ಟಣ: ನಮ್ಮದ್ದು ಎನ್ನುವುದು ಈ ಭೂಮಿಯ ಮೇಲೆ ಏನೂ ಇಲ್ಲ. ನಾವಿರಷ್ಟು ದಿನ ಅನುಭವಿಸುವ ಸಂಪತ್ತು, ಗಳಿಸಿರುವುದೆಲ್ಲ ಭಗವಂತನದು. ಎಲ್ಲವನ್ನೂ ಭಗವಂತನಿಂದ ನಾವು ಪಡೆದು, ಅವನಿಗೆ ಕೃತಜ್ಞತಾ ಸಮರ್ಪಣೆಯನ್ನು ಕೊಡದಿರುವುದು ಸರಿಯಲ್ಲವೆಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.


ಪಟ್ಟಣದ ಶ್ರೀಗುರು ರಾಘವೇಂದ್ರ ಮಠಕ್ಕೆ ಇತ್ತೀಚೆಗೆ ಆಗಮಿಸಿದ್ದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಅಲ್ಲಿಯೇ ವಾಸ್ತವ್ಯ ಹೂಡಿ ಶ್ರೀಮಠದಲ್ಲಿ ಬೆಳಗ್ಗೆ ಸಂಸ್ಥಾನ ಪೂಜೆ ನೆರವೇರಿಸಿ, ಪಾಂಡುರಂಗ ವಿಠಲನಿಗೆ ವಿಶೇಷ ಪೂಜೆ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಿದರು. ಶ್ರೀರಾಘವೇಂಧ್ರ ಮಠದ ಟ್ರಸ್ಟ್ ಖಜಾಂಚಿಯಾಗಿರುವ ಸಿ.ಎಂ.ರಾಘವೇಂದ್ರ ಅವರು ಶ್ರೀಮಠದ ರಾಜಗೋಪುರ ನಿರ್ಮಾಣಕ್ಕೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಶ್ರೀಗಳು ಗೌರವಿಸಿದರು.


ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯ ಭೂಮಿಗೆ ಬರುವ ಮುಂಚೆಯೂ ಇಲ್ಲಿ ಎಲ್ಲವೂ ಇತ್ತು, ಆತ ಹೋದ ನಂತರವೂ ಎಲ್ಲವೂ ಇರುತ್ತೆ, ಮಧ್ಯೆ ಇರುವ ದಿನಗಳಲ್ಲಿ ಆತ ಇದೆಲ್ಲವು ನನ್ನದು, ನನ್ನ ಸಂಪತ್ತು, ಸಂಪಾದನೆ ಎಂದು ಬೀಗುತ್ತಾನೆ. ಅದೆಲ್ಲವೂ ಭಗವಂತನಿಗೆ ಸೇರಿದ್ದು, ಇಷ್ಟೆಲ್ಲವನ್ನು ಕೊಟ್ಟರುವ ನಾವು ಭಗವಂತನಿಗೆ ಏನು ಕೊಡುತ್ತೆವೆ, ಕಡೇ ಪಕ್ಷ ಕೃತಜ್ಞತಾ ಸಮರ್ಪಣೆಯನ್ನು ನೀಡದಿರುವುದು ಮನುಷ್ಯ ಜನ್ಮದಾಗಿದೆ ಎಂದರು.


ದುಡ್ಡು, ಕಾಸು ಬಂದಾಗ ದೇವರ ನೆನಪಾಗುವುದಿಲ್ಲ, ಕಷ್ಟ-ಸುಖಗಳು ಮನುಷ್ಯನಿಗೆ ಬರುವುದು ಸಹಜ, ಸಂಪತ್ತು ಬಂದಾಗ ದುಶ್ಚಟಗಳು ನಮ್ಮನ್ನು ಕರೆಯುತ್ತವೆ, ಅವು ಹತ್ತಿರವಾಗುತ್ತವೆ. ಬದುಕನ್ನು ಹಾಳು ಮಾಡಿಕೊಳ್ಳುತ್ತಾನೆ. ನಮ್ಮ ಬದುಕಿನಲ್ಲಿ ಬಂದ ಹಣದ ಮಹಾಲಕ್ಷ್ಮೀಯನ್ನು ಸತ್ಕಾರ್ಯ, ದೇವರ ಕಾರ್ಯ ಮತ್ತು ಒಳ್ಳೆ ಕಾರ್ಯಗಳಿಗೆ ವಿನಿಯೋಗಿಸಿದರೆ ಬದುಕು ಸಾರ್ಥಕ ಮಾಡಿಕೊಳ್ಳಬೇಕು. ಇಲ್ಲಿನ ರಾಯರಮಠವು ನಡೆಸುವ ಎಲ್ಲ ಕಾರ್ಯಗಳಿಗೆ ಪೇಜಾವರ ಮಠವನ್ನು ಭಾಗಿಯಾಗಿಸಿಕೊಳ್ಳುತ್ತಿದೆ ಇದು ಸಂತೋಷದಾಯಕ ಎಂದರು.


ಶ್ರೀರಾಘವೇಂದ್ರ ಮಠದ ಅಧ್ಯಕ್ಷ ಸಿ.ವಿ.ರಾಜಪ್ಪ ಮಾತನಾಡಿ, ಗುರುಗಳು ಮತ್ತು ದೇವರ ಪ್ರೇರಣೆ ಇಲ್ಲದೆ ಎನೂ ನಡೆಯುವುದಿಲ್ಲ, ಶ್ರೀಮಠದ ಪ್ರತಿ ಕಾರ್ಯಕ್ಕೆ ಗುರುಗಳಾದ ಪೇಜಾವರ ಶ್ರೀಗಳು ಮತ್ತು ರಾಯರ ಆಶೀರ್ವಾದ ಕಾರಣವಾಗಿದೆ. ಹಿಂದು ದೇಶವಾದ ಭಾರತದಲ್ಲಿ ಸನಾತನ ಧರ್ಮ ಇಂದಿಗೂ ಉಳಿದಿದೆ ಇದು ನಮ್ಮೆಲ್ಲರ ಪುಣ್ಯ, ಅದನ್ನು ನಾವು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗಬೇಕು ಎಂದರು.
ಮಠದ ಕಾರ್ಯದರ್ಶಿ ಪುಟ್ಟಸ್ವಾಮೀಗೌಡ, ಖಜಾಂಚಿ ಸಿ.ಎಂ.ರಾಘವೇಂದ್ರ, ನಿರ್ದೇಶಕರಾದ ಪ್ರದೀಪ್, ಸಿ.ಆರ್.ಹರ್ಷ, ಸುನೀಲ್, ದೀಪಕ್ ಇದ್ದರು.