ಮೈಸೂರು: ಚಾಮರಾಜನಗರದ ರಂಗವಾಹಿನಿ ಸಂಸ್ಥೆ, ಮೈಸೂರಿನ ಸಮಾನ ಮನಸ್ಕ ಗೆಳೆಯರ ಬಳಗ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರಲ್ಲಿ ಜೂ.16 ರಂದು ಸಂಜೆ 5ಕ್ಕೆ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸ್ಮರಣಾರ್ಥ ‘ಸ್ವಾಭಿಮಾನಿಗೆ ಗಾನನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ರಂಗವಾಹಿನಿ ಅಧ್ಯಕ್ಷ ಕೆ.ಎಂ. ನರಸಿಂಹಮೂರ್ತಿ ತಿಳಿಸಿದರು.
ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶ್ರೀನಿವಾಸ ಪ್ರಸಾದ್ ಭಾವಚಿತ್ರಕ್ಕೆ ಅವರ ಪತ್ನಿ ಭಾಗ್ಯಲಕ್ಷ್ಮೀ ಪುಷ್ಪಾರ್ಚನೆ ನೆರವೇರಿಸುವರು. ಮೈಸೂರು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿ.ಹರಕುಮಾರ್, ಎನ್.ಶಂಕರ್, ಬದನಾಳು ಬಸವಣ್ಣ, ಸೋಮಯ್ಯ ಮಲೆಯೂರು, ಕೆ.ಆರ್.ಗೋಪಾಲಕೃಷ್ಣ ಇದ್ದರು.