ಕಾಸರಗೋಡು: ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್, ಹೃದಯವಾಹಿನಿ ಕರ್ನಾಟಕ, ಎಸ್.ಕೆ.ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಸಹಯೋಗದಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಿದ್ದ ದ್ವಿತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರಿಗೆ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದ ಗೌರವ ಪುರಸ್ಕಾರ ಪ್ರದಾನಿಸಲಾಯಿತು. ಸಮ್ಮೇಳನಾಧ್ಯಕ್ಷ ಲೆ.ಜ.ಡಾ.ಡೇವಿಡ್ ಫ್ರಾಂಕ್ ಫರ್ನಾಂಡಿಸ್, ಪ್ರಮುಖರದ ಕೆ.ಪಿ. ಮಂಜುನಾಥ ಸಾಗರ್, ಡಾ.ಸಿ.ಸೋಮಶೇಖರ, ಎಸ್.ಎಲ್.ಭಾರದ್ವಾಜ್ ಬೇಕಲ್, ರತ್ನಾ ಹಾಲಪ್ಪ ಗೌಡ, ಶಿವರಾಜ್ ಪಾಂಡೇಶ್ವರ, ಮಂಜುನಾಥ ರೇವಣ್ಕರ್, ಯದುಪತಿ ಗೌಡ, ಮಧುರಾ ಭಟ್, ಸೋಮಶೇಖರ ಗಾಂಧಿ, ಕೆ.ಗುರುಪ್ರಸಾದ ಕೋಟೆಕಣಿ,ಕೆ. ಜಗದೀಶ ಕೂಡ್ಲು, ಶ್ರೀಕಾಂತ ಕಾಸರಗೋಡು ಉಪಸ್ಥಿತರಿದ್ದರು.