ಜಿಲ್ಲೆ

ಪಾಣಿಗಟ್ಟಿಯಲ್ಲಿ ನಿವೃತ್ತ ಯೋಧನಿಗೆ ಸನ್ಮಾನ

ಶಿಗ್ಗಾಂವಿ: ತಾಲೂಕಿನ ಪಾಣಿಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ 77ನೇ ಸ್ವಾತಂತ್ರ ದಿನ ಆಚರಿಸಲಾಯಿತು.


ಕರವೇ ವತಿಯಿಂದ ನಿವೃತ್ತ ಯೋಧ ಕಿರಣ ಹೊನ್ನಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಲೆಯ ಮಕ್ಕಳಿಗೆ ಪೆನ್, ನೋಟ್​ಬುಕ್, ಅಂಕಲಿಪಿ, ಪೆನ್ಸಿಲ್ ವಿತರಿಸಿದರು. ಕರವೇ ತಾಲೂಕು ಅಧ್ಯಕ್ಷ ಸಂತೋಷಗೌಡ ಪಾಟೀಲ, ಮೆಹಬೂಬಸಾಬ್ ಮಸೂತಿ, ಪಾಣಿಗಟ್ಟಿ ಗ್ರಾಮ ಘಟಕ ಅಧ್ಯಕ್ಷ ಜಾವೇದಅಹ್ಮದ್ ಮಸೂತಿ, ಅಶೋಕ ಕುಂದಗೋಳ, ಹನುಮಂತಗೌಡ ಮಳಪ್ಪನವರ, ಮೆಹಬೂಬ ಬೂದಿಹಾಳ, ಸಂತೋಷಗೌಡ ಹಿರೇಗೌಡ್ರ, ಖಾಸಿಂಸಾಬ್ ನದಾಫ್ ಇದ್ದರು.