ಜಿಲ್ಲೆ

ರತನ್ ಟಾಟಾ ಎಂದಿಗೂ ಮರೆಯದ ಮಾಣಿಕ್ಯ: ಅಲಯನ್ಸ್ ಕ್ಲಬ್‌ನ ಪ್ರಾಂತಪಾಲ ಕೆ.ಟಿ.ಹನುಮಂತು ಬಣ್ಣನೆ

ಮಂಡ್ಯ: ಖ್ಯಾತ ಉದ್ಯಮಿ ರತನ್ ಟಾಟಾ ಅವರು ಎಂದಿಗೂ ಮರೆಯದ ಮಾಣಿಕ್ಯನಂತೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಬಣ್ಣಿಸಿದರು.

ನಗರದ ಗಾಂಧಿಭವನದಲ್ಲಿ ಅಲಯನ್ಸ್ ಕ್ಲಬ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಗಾಂಧಿ ಯೋಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಟಾಟಾ ಕಂಪನಿಗೆ ಉತ್ತಮ ಹೆಸರಿದೆ. ಅವರು ತಮ್ಮ ಸಂಪಾದನೆಯ ಶೇ.64ರಷ್ಟು ತಮ್ಮ ಟ್ರಸ್ಟ್‌ಗೆ ವರ್ಗಾಯಿಸಿ ಸಮಾಜಮುಖಿ ಕಾರ್ಯಗಳಲ್ಲಿ ಆ ಹಣವನ್ನು ವಿನಿಯೋಗಿಸುತ್ತಾರೆ. ಎಂದರು.

ರತನ್ ಟಾಟಾ ಅವರು ಜವಳಿ ಉದ್ಯಮದಿಂದ ಪ್ರಾರಂಭ ಮಾಡಿ ಭಾರತದ ಎಲ್ಲ ಕಡೆ ಐಶಾರಾಮಿ ಹೋಟೆಲ್ ಸ್ಥಾಪಿಸುತ್ತಾರೆ. ಮೊದಲ ಬಾರಿಗೆ ಕಾರ್ಮಿಕರಿಗೆ ಪಿಎಫ್ ನೀಡುವ ಮುಖಾಂತರ ಮಾದರಿಯಾಗುತ್ತಾರೆ ಇವರ ಸಾಮಾಜಿಕ ಕಳಕಳಿ ಅನನ್ಯವಾಗಿದೆ ಎಂದು ಶ್ಲಾಘಿಸಿದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿದರು. ಅಲಯನ್ಸ್ ಕ್ಲಬ್‌ನ ರಮೇಶ್ ಕೃಷ್ಣಪ್ಪ, ಗಾಂಧಿ ಭವನದ ಅವಿನಾಶ್, ನಗರಸಭೆ ಸದಸ್ಯೆ ಮಂಜುಳಾ, ಶಿವಕುಮಾರ್, ತ್ರಿಜನ್ಯ ಇದ್ದರು.