ಶಿರ್ವ: ಮಂಗಳೂರು ವಿವಿಯಿಂದ ಡಾಕ್ಟರೆಟ್ ಪದವಿ ಪಡೆದ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಡಾ.ವಾರಿಜಾ ಮೋಹನ್ ಅವರನ್ನು ಬಂಟಕಲ್ಲು ಎಸ್.ವಿ ಕನ್ಟ್ರಕ್ಷನ್ಸ್ ಮತ್ತು ಪದಕಣ್ಣಾಯ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.
ಕಾಪು ತಾಲೂಕು ಕಸಾಪ ಅಧ್ಯಕ್ಷ ಹಾಗೂ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಸನ್ಮಾನ ನೆರವೇರಿಸಿದರು. ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಸಡಂಬೈಲು ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಕಚೇರಿ ನಿವೃತ್ತ ಪ್ರಬಂಧಕಿ ಶಾಂತಾ, ಮೋಹನ್ ಸಾಲಿಕೇರಿ, ವಾಸುದೇವ, ದಿನೇಶ್ ಎಸ್, ಬಂಟಕಲ್ಲು ಸಂಜೀವ ವೈ., ದೈವಸ್ಥಾನ ಅರ್ಚಕ ಸಂತೋಷ್, ಚಂದ್ರಶೇಖರ್ ಮೊದಲಾದವರಿದ್ದರು. ಬಂಟಕಲ್ಲು ಎಸ್.ವಿ ಕನ್ಟ್ರಕ್ಷನ್ಸ್ ಮತ್ತು ಪದಕಣ್ಣಾಯ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಶಂಕರ ಪದಕಣ್ಣಾಯ ಸ್ವಾಗತಿಸಿದರು. ಪಾರ್ಥ ಸಾರಥಿ ಕುಂಜಾರುಗಿರಿ ವಂದಿಸಿದರು. ಜೀರ್ಣೊದ್ಧಾರ ಸಮಿತಿ ಕಾರ್ಯದರ್ಶಿ ಶಿಕ್ಷಕ ಸತ್ಯಸಾಯಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.