ಇಂಡಿ ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಪದಾಧಿಕಾರಿಗಳು, ನಿರ್ದೇಶಕರ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಯಶವಂತಗೌಡ ಪಾಟೀಲ ಉದ್ಘಾಟಿಸಿದರು. ಬಸವರಾಜ ರಾಹೂರ, ಆನಂದಗೌಡ ಬಿರಾದಾರ, ಕಾಂತು ಇಂಡಿ, ಅರ್ಜುನ ಲಮಾಣಿ ಇತರರಿದ್ದರು.  
ಜಿಲ್ಲೆ

ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರಿಗೆ ಸನ್ಮಾನ

ಇಂಡಿ: ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ದೊಡ್ಡ ಸಂಘಟನೆ, ಜನಪ್ರತಿನಿಧಿಗಳಿಗಿಂತ ಹೆಚ್ಚಿನ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಇಂಡಿ ಘಟಕ ಹಾಗೂ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನರಿಗೆ ಸರ್ಕಾರಿ ನೌಕರರ ಮೇಲೆ ವಿಶ್ವಾಸ ನಂಬಿಕೆ ಇದೆ. ವಿಶ್ವಾಸಾರ್ಹತೆಗೆ ಧಕ್ಕೆ ಬರದಂತೆ ಕೆಲಸ ಮಾಡಿ ಎಂದರು.

ಸರ್ಕಾರಿ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಬಸವರಾಜ ರಾಹೂರ ಮಾತನಾಡಿ, ನೂತನ ಪದಾಧಿಕಾರಿಗಳು ನೌಕರರ ಹಿತ ಕಾಯುವ ಕೆಲಸ ನಿಭಾಯಿಸಬೇಕು. ಒಗ್ಗಟ್ಟು ಇದ್ದಾಗ ನಮ್ಮ ರಕ್ಷಣೆ ನಮ್ಮಿಂದಲೇ ಸಾಧ್ಯವಿದೆ. ಸದಸ್ಯರು ಸಂಘಕ್ಕೆ ಶಕ್ತಿಯಾಗಬೇಕು ಎಂದರು.

ಜೆಒಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಬಿರಾದಾರ, ಕಾಂತು ಇಂಡಿ, ಅರ್ಜುನ ಲಮಾಣಿ, ವೈ.ಟಿ.ಪಾಟೀಲ, ರವಿ ಗಿಣ್ಣಿ, ಜಯರಾಮ ಚವ್ಹಾಣ, ಜಟ್ಟೆಪ್ಪ ಮಾದರ ಮಾತನಾಡಿದರು.

ಜೆಒಸಿಸಿ ಬ್ಯಾಂಕ್ ಹಾಗೂ ನೌಕರರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಲ್ಲಾಭಕ್ಷ ವಾಲಿಕಾರ, ಬಿ.ಎ.ಇನಾಮದಾರ, ಪಿ.ಜಿ.ಕಲ್ಮನಿ, ಬಿ.ಎಂ.ವಠಾರ, ವಿ.ಪಿ.ಅರವತ್ತು, ಪ್ರಕಾಶ ಐರೋಡಗಿ, ಎಂ.ಸಿ.ಗಿರಣಿವಡ್ಡರ, ಗೀತಾ ಹತ್ತಿ, ಪುಷ್ಪಾ ಗಚ್ಚಿನಮಠ ಇತರರಿದ್ದರು.