ಹುನಗುಂದ: ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಚಿತ್ರದುರ್ಗದ ನೂತನ ಸಂಸದ ಗೋವಿಂದ ಕಾರಜೋಳ ಅವರನ್ನು ಸಂಸ್ಥೆ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಸನ್ಮಾನಿಸಿದರು.
ಬಳಿಕ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದು, ಸಂಘದ ಅಧ್ಯಕ್ಷ ಡಾ. ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದರು.
ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ನಿರ್ದೇಶಕರಾದ ಸಂಗಣ್ಣ ಚಿನಿವಾಲರ, ವೀರಣ್ಣ ಬಳೂಟಗಿ, ಡಾ. ಶಂಕರ ಮುದಗಲ್ಲ, ರವಿ ಹುಚನೂರ, ಡಾ. ದೇಸಾಯಪ್ಪ ಹವಾಲ್ದಾರ್, ಅರುಣ ದುದ್ಗಿ, ಎಂ.ಎಸ್. ಮಠ, ರಾಚಪ್ಪ ರಾಜಮನಿ, ಬಿ.ಎಸ್. ಕೆಂದೂರ ಹಾಗೂ ಸಿಬ್ಬಂದಿ ಇದ್ದರು.