ಮೂಲ್ಕಿ: ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಂಡು ದೈವಾರಾಧನೆ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳಗುತ್ತಿರುವವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಡಿ ಸಾಧಕರ ನೆಲೆಯಲ್ಲಿ ಬಂಟ ದೈವ ದರ್ಶನ ಪಾತ್ರಿ ಮುರಳಿ ಪೂಜಾರಿ ಪಡುಬಿದ್ರಿ ಅವರನ್ನು ಗೌರವಿಸಿ ಮಾತನಾಡಿದರು.
ಮೂಲ್ಕಿ ಸೀಮೆಯ ಬಂಕಿನಾಯಕರು, ದರ್ಶನ ಪಾತ್ರಿ ಜಯಶೀಲ ಪೂಜಾರಿ, ರಮೇಶ್ ಪೂಜಾರಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಜೆಸಿ ಟ್ರಸ್ಟ್ ಅಧ್ಯಕ್ಷ ಹಬೀಬುಲ್ಲ, ಸಂಘಟಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಉದ್ಯಮಿ ಜೋನ್ ಕ್ವಾಡ್ರಾಸ್, ವೈ.ಎನ್.ಸಾಲ್ಯಾನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಜೆ.ಸಿ.ದಿನೇಶ್ ಶೆಟ್ಟಿ, ರಮಾನಾಥ ಸುವರ್ಣ ಕೊಳಚಿಕಂಬಳ, ರವಿಚಂದ್ರ ರಾವ್, ಕೃಷ್ಣಯ್ಯ ಆಚಾರ್ಯ ಪುನರೂರು, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ವಂದಿಸಿದರು. ರವಿಚಂದ್ರ ನಿರೂಪಿಸಿದರು.