ಭದ್ರಾವತಿ: ನಗರದ ಲೋಯರ್ ಹುತ್ತಾ ಬಿ.ಎಚ್.ರಸ್ತೆಯಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಹುತಾತ್ಮರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಕಾಡುಗಳ್ಳ ನರಹಂತಕ ವೀರಪ್ಪನ್‌ನಿಂದ ಹತರಾದ ಐಎಫ್‌ಎಸ್ ಅಧಿಕಾರಿ ಶ್ರೀನಿವಾಸ್ ಸೇರಿ 57 ಮಂದಿಗೆ ಗೌರವ ನಮನ ಸಲ್ಲಿಸಿ ಅವರ ಸೇವೆ ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಐಎಫ್‌ಎಸ್ ಅಧಿಕಾರಿ ಆಶಿಕ್ ರೆಡ್ಡಿ, ಪ್ರೊಬೇಷನರಿ ಐಎಫ್‌ಎಸ್ ಅಧಿಕಾರಿ ಪುಲ್ಕಿತ್ ಮೀನಾ, ವ್ಯವಸ್ಥಾಪಕರಾದ ರತ್ನಪ್ರಭಾ, ನಂದಾ ಶ್ರೀಧರ್, ಆರ್‌ಎಫ್‌ಒ ರಾಕೇಶ್, ರಶೀದ್, ಕೆ.ಎನ್.ರವೀಂದ್ರನಾಥ್, ಡಿಆರ್‌ಎಫ್‌ಒ ದಿನೇಶ್, ಸಿಬ್ಬಂದಿ ಇದ್ದರು.