ಚಿಕ್ಕಮಗಳೂರು: ರಾಜ್ಯ ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅಕಾಲಿಕವಾಗಿ ನಿಧನ ಹೊಂದಿದ ಹಿನ್ನೆಲೆ ಸೋಮವಾರ ಜಿಲ್ಲಾ ಕಂಟ್ರಾಕ್ಟರ್ ಅಸೋಸಿಯೇಷನ್‌ನಿಂದ ಸಂಘದ ಕಚೇರಿಯಲ್ಲಿ ಕೆಂಪಣ್ಣ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಎಸ್.ಶಾಂತೇಗೌಡ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಕೆಂಪಣ್ಣಅವರು ಸಂಘವನ್ನು ಸಂಘಟಿಸುವುದರಲ್ಲಿ ಅತಿಹೆಚ್ಚು ಶ್ರಮ ವಹಿಸಿದ್ದರು. ಗುತ್ತಿಗೆದಾರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುತ್ತಿದ್ದರು ಎಂದು ಹೇಳಿದರು.
ರಾಜ್ಯದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಿಸುವ ಮೂಲಕ ೨೦೧೯ರಲ್ಲಿ ರಾಜ್ಯಾದ್ಯಕ್ಷ ಹುದ್ದೆ ಅಲಂಕರಿಸಿದರು. ಇವರ ಅವಧಿಯಲ್ಲಿ ಎರಡು ಯಶಸ್ವಿ ಸಮ್ಮೇಳನಗಳನ್ನು ನಡೆಸಿ ಗುತ್ತಿಗೆದಾರರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಶ್ರಮಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎ.ನಾಗರಾಜು, ಕಾರ್ಯದರ್ಶಿ ಬಿ.ಎಂ.ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಸಿ.ಎಸ್.ಖಲಂಧರ್, ಸದಸ್ಯರಾದ ವೆಸ್ಲಿಪಿಂಟೋ, ಕೆ.ಎನ್.ದೊಡ್ಡೇಗೌಡ, ಎಂ.ಎ.ರವಿಕುಮಾರ್, ಎ.ಟಿ.ಅನೂಪ್‌ಕುಮಾರ್, ನಗರಸಭೆ ಸದಸ್ಯ ಶಹಬಾದ್, ಮುಖಂಡರಾದ ಬಿ.ಸಿ.ಭದ್ರೇಗೌಡ, ಗಂಗಾಧರ್, ವಿ.ಟಿ.ನಿಂಗರಾಜು, ಎಲ್.ಜಿ.ಕೃಷ್ಣ, ಟಿ.ಎ.ನಿಂಗೇಗೌಡ ಮತ್ತಿತರಿದ್ದರು.