ಜಿಲ್ಲೆ

ಕಾರ್ಗಿಲ್​ ಸೈನಿಕರಿಗೆ ಗೌರವ ಸಮರ್ಪಣೆ; ಸಾವಿರ ಬೈಕ್​ಗಳಿಂದ ಜಾಥಾ

ಬೆಂಗಳೂರು: ಕಾರ್ಗಿಲ್​ ವಿಜಯ್​ ದಿವಸ್​ ಹಿನ್ನೆಲೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂ, ಪ್ರಿಯಕೃಷ್ಣ ಫೌಂಡೇಶನ್, ಶೀ ಫಾರ್​ ಸೊಸೈಟಿ, ಎ 7 ಎಂಟರ್ಟೈನ್​ಮೆಂಟ್​ ಜಂಟಿಯಾಗಿ ಆಯೋಜಿಸಿದ್ದ ಬೈಕ್​ ಹಾಗೂ ಜೀಪ್​ ಜಾಥಾಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಎನ್​.ಕೆ. ಶಿವಣ್ಣ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೇಶಕ್ಕಾಗಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಾರೆ. ಸೈನಿಕರ ಸಾಹಸ ಜೀವನ ಇಂದಿನ ಯುವಸಮಾಜಕ್ಕೆ ಪ್ರೇರಣೆಯಾಗಬೇಕು. ಭಾರತೀಯ ಯೋಧರು ಪಾಕಿಸ್ತಾನವನ್ನು ಸೋಲಿಸಿ, ಕಾರ್ಗಿಲ್​ ಪ್ರದೇಶವನ್ನು ಉಳಿಸಿಕೊಂಡರು. ಕಾರ್ಗಿಲ್​ ಯುದ್ದದಲ್ಲಿ ಹೋರಾಡಿದ ಯೋಧರಿಗೆ ಗೌರವ ಮತ್ತು ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಮಾಣಿಕ್​ ಷಾ ಪೆರೇಡ್​ ಮೈದಾನದಿಂದ ಆರಂಭಗೊಂಡ ಜಾಥಾದಲ್ಲಿ ಸೈನಿಕರು, ಮಾಜಿ ಸೈನಿಕರು ಹಾಗೂ ಹವ್ಯಾಸಿ ಬೈಕ್​ ಸವಾರರು ಸೇರಿ ಸಾವಿರ ಬೈಕರ್​ಗಳು ಪಾಲ್ಗೊಂಡಿದ್ದರು. 200 ಅಡಿ ಉದ್ದದ ತ್ರಿವರ್ಣ ಧ್ವಜ ಹಾರಾಡಿಸಲಾಯಿತು. ಗೋವಿಂದರಾಜನಗರ ವಿಧಾನಸಭಾ ೇತ್ರದ ಬಿಜಿಎಸ್​ ಆಟದ ಮೈದಾನದಲ್ಲಿ ಜಾಥಾ ಕೊನೆಗೊಂಡಿತು. ಶಾಸಕರಾದ ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಮೇಜರ್​ ಜನರಲ್​ ಮ್ಯಾಥ್ಯೂ, ಬ್ರಿಗೇಡಿಯರ್​ ಆರ್.ಎಸ್. ಬುದ್ದಹಾರ್​, ರಂಜಿತ್​ ಆಳ್ವ, ಕರ್ನಲ್​ ಪುನೀತ್​ ಕುಮಾರ್​, ಭಾರದ್ವಾಜ್​, ವೆಟರನ್​ ಕರ್ನಲ್​ ಅವಿನ್​ ಉತ್ತಯ್ಯ ಇತರರಿದ್ದರು.