ಜಿಲ್ಲೆ

ಚಿನ್ನದ ಪದಕ ವಿಜೇತ ಗೃಹರಕ್ಷಕ ಸಂತೋಷ್ ಸಲ್ಡಾನರಿಗೆ ಸನ್ಮಾನ

ಮಂಗಳೂರು: ಉಳ್ಳಾಲ ಘಟಕದ ಗೃಹರಕ್ಷಕ ಸಂತೋಷ್ ಸಲ್ಡಾನ ಅವರು ಜು.29ರಿಂದ ಆ.23ರ ತನ ಬೆಂಗಳೂರಿನಲ್ಲಿ ನಡೆದ ಗೃಹರಕ್ಷಕರ ಅಧಿಕಾರಿಗಳ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಜೇತರಾಗಿದ್ದು, ಅವರನ್ನು ಗುರುವಾರ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಸನ್ಮಾನಿಸಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ರಾಜ್ಯಮಟ್ಟದ ತರಬೇತಿಯಲ್ಲಿ ಒಟ್ಟು 31 ಜಿಲ್ಲೆಗಳ 62 ಗೃಹರಕ್ಷಕರು ಭಾಗವಹಿಸಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿ ಚಿನ್ನದ ಪದಕ ಪಡೆದ ಉಳ್ಳಾಲ ಘಟಕದ ಗೃಹರಕ್ಷಕ ಸಂತೋಷ್ ಸಲ್ಡಾನ ಇವರು ನಮ್ಮ ಜಿಲ್ಲೆಗೆ ಹೆಮ್ಮೆಯನ್ನು ತಂದುಕೊಟ್ಟಿರುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ 15 ಘಟಕಗಳ ಗೃಹರಕ್ಷಕರಿಗೆ ಮುಂದಿನ ತರಬೇತಿಗಳಲ್ಲಿ ಭಾಗವಹಿಸಲು ಇವರ ಸಾಧನೆಯು ಸ್ಫೂರ್ತಿಯಾಗಲಿ ಎಂದು ಹಾರೈಸಿದರು.


ಜಿಲ್ಲಾ ಗೃಹರಕ್ಷಕ ದಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಘಟಕದ ಸಾಜರ್ಂಟ್ ಸುನಿಲ್ ಕುಮಾರ್ ವಂದಿಸಿದರು. ಕಚೇರಿ ಸಿಬ್ಬಂದಿ ಮಂಜುಳಾ, ಉಪ್ಪಿನಂಗಡಿ ಘಟಕದ ಹಿರಿಯ ಗೃಹರಕ್ಷಕ ಅಣ್ಣು ಬಿ., ಗೃಹರಕ್ಷಕರಾದ ಧನಂಜಯ್, ರಾಜೇಶ್ ಗಟ್ಟಿ, ನವೀನ್ ಕುಮಾರ್, ಸಂತೋಷ್ ಜಾದವ್, ಚಂದ್ರಶೇಖರ್, ಸಂಜಯ್ ಶೆಣೈ, ಗೃಹರಕ್ಷಕಿಯರಾದ ಸುರೇಖಾ, ವನಿತಾ, ಸುಲೋಚನಾ, ನಿಶಾ ಹಾಗೂ ಉಪ್ಪಿನಂಗಡಿ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.