ಶಿಕ್ಷಕರ ದಿನಾಚರಣೆ ಅಂಗವಾಗಿ ತೆಕ್ಕಟ್ಟೆ ಮಲ್ಯಾಡಿಯ ನಿವೃತ್ತ ಅಧ್ಯಾಪಕ ಹಿರಿಯ ಚೇತನ ಭಗವದ್ ಸ್ವರೂಪಿ ಗಣಪಯ್ಯ ಶೆಟ್ಟಿ ಅವರನ್ನು ಹೇರಿಕುದ್ರುವಿನ ಸ್ವಗೃಹದಲ್ಲಿ ತೆಕ್ಕಟ್ಟೆ ರೋಟರಿ ಕ್ಲಬ್ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು 
ಜಿಲ್ಲೆ

ಗಣಪಯ್ಯ ಶೆಟ್ಟಿಗೆ ಸನ್ಮಾನ

ಇಂದಿರಾ ಎನ್ ಕೆ

ಕೋಟ: ಶಿಕ್ಷಕರ ದಿನಾಚರಣೆ ಅಂಗವಾಗಿ ತೆಕ್ಕಟ್ಟೆ ಮಲ್ಯಾಡಿಯ ನಿವೃತ್ತ ಅಧ್ಯಾಪಕ, ಹಿರಿಯ ಚೇತನ ಭಗವದ್ ಸ್ವರೂಪಿ ಗಣಪಯ್ಯ ಶೆಟ್ಟಿ ಅವರನ್ನು ಹೇರಿಕುದ್ರುವಿನ ಸ್ವಗೃಹದಲ್ಲಿ ತೆಕ್ಕಟ್ಟೆ ರೋಟರಿ ಕ್ಲಬ್ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು.

ರೋಟರಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಸದಸ್ಯ ರಾಜೀವ ಶೆಟ್ಟಿ ಮಲ್ಯಾಡಿ ಶಿಕ್ಷಕರ ದಿನಾಚರಣೆ ಮಹತ್ವ ತಿಳಿಸಿ ಸನ್ಮಾನಿತರ ಗುಣಗಾನ ಮಾಡಿದರು.

ರೋಟರಿ ಸದಸ್ಯರಾದ ಸುರೇಶ್ ಬೇಳೂರು, ವಿಠಲ ರಾವ್, ಸುಧಾಕರ ಶೆಟ್ಟಿ, ಮಂಜುನಾಥ ಕಾಂಚನ್, ಚಂದ್ರಶೇಖರ ಶೆಟ್ಟಿ, ಕ್ಲಬ್ ಕಾರ್ಯದರ್ಶಿ ಕೃಷ್ಣ ಮೊಗವೀರ, ನಿವೃತ್ತ ಅಧ್ಯಾಪಕ ಕೊರಗಯ್ಯ ಶೆಟ್ಟಿ, ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು. ರೋಟರಿ ಸದಸ್ಯ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿದರು. ರಾಘವೇಂದ್ರ ಹರಪನಕೆರೆ ವಂದಿಸಿದರು.