ಕೊಳ್ಳೇಗಾಲದಲ್ಲಿ ಗುರುವಾರ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಹನೂರು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸದಸ್ಯ ಧನಗೆರೆ ಮಹದೇವ ಸನ್ಮಾನಿಸಿದರು. ಮಧುವನಹಳ್ಳಿ ಶಿವಕುಮಾರ್, ಚೇತನ್ ದೊರೈರಾಜ್, ಗುಂಡೇಗಾಲ ಸುಂದರಣ್ಣ, ಶಿವಶಂಕರ್ ಇದ್ದರು. 
ಜಿಲ್ಲೆ

ಮಾಜಿ ಶಾಸಕ ಆರ್.ನರೇಂದ್ರಗೆ ಸನ್ಮಾನ

ಮಾದೇಶ್ ತಿ.ನರಸೀಪುರ

ಕೊಳ್ಳೇಗಾಲ: ಹನೂರು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸದಸ್ಯ ಧನಗೆರೆ ಮಹದೇವ ಗುರುವಾರ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಿದರು.

ಕೊಳ್ಳೇಗಾಲ ಪಟ್ಟಣದ ಮಾಜಿ ಶಾಸಕರ ನಿವಾಸಕ್ಕೆ ಭೇಟಿ ನೀಡಿದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರು ಆರ್.ನರೇಂದ್ರ ಅವರಿಗೆ ಶಾಲು, ಹಾರ ಹೊದಿಸಿ, ಫಲಪುಷ್ಪ ನೀಡಿದರು. ಈ ವೇಳೆ ಸದಸ್ಯ ಧನಗೆರೆ ಮಹದೇವ ಅವರಿಗೆ ಮಾಜಿ ಶಾಸಕ ಆರ್.ನರೇಂದ್ರ ಅಭಿನಂದಿಸಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಹನೂರು ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ರೈತರು ಹಾಗೂ ಬಡಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದರು.

ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಯುವ ಮುಖಂಡ ಚೇತನ್ ದೊರೈರಾಜ್, ಗುಂಡೇಗಾಲ ಸುಂದರಣ್ಣ, ಮರಿಸ್ವಾಮಿ, ಪ್ರೇಮಣ್ಣ, ಸರಗೂರು ಶಿವಕುಮಾರ್, ಶಿವಶಂಕರ್, ಸತ್ತೇಗಾಲ ಶಿವಶಂಕರ್, ಸಿದ್ದರಾಜು, ಕಾಂತರಾಜು ಇತರರು ಇದ್ದರು.