ಹುಬ್ಬಳ್ಳಿ: ರೈತ ಹುತಾತ್ಮ ದಿನದ ಅಂಗವಾಗಿ ರೈತ ಬಂಡಾಯದ ನೆಲ ನವಲಗುಂದದಲ್ಲಿ ಸಿಐಟಿಯು ನೇತೃತ್ವದಲ್ಲಿ ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕಳಸಾ-ಬಂಡೂರಿ ಯೋಜನೆಯ ಶೀಘ್ರ ಜಾರಿ ಹಾಗೂ ಅನ್ನದಾತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಇದೇ ಸಂದರ್ಭದಲ್ಲಿ ಸರ್ಕಾರಗಳಿಗೆ ಆಗ್ರಹಿಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾ ಖಜಾಂಚಿ ಗುರುಸಿದ್ದಪ್ಪ ಅಂಬಿಗೇರ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯೆ ಸುನಂದಾ ಚಿಗರಿ, ಕಾರ್ಯದರ್ಶಿ ಶೋಭಾ ಮೂಲಿಮನಿ, ಹಮಾಲಿ ಸಂದ ಅಧ್ಯಕ್ಷ ನಾರಾಯಣ ಆರೇರ, ಮುಖಂಡರಾದ ಶರೀಫ್ ಬಿಂಕದಕಟ್ಟಿ, ಅಬ್ದುಲ್ ಮಕಾನದಾರ, ಸಂತೋಷ ಮಲ್ಲಾಡಿ ಮುಂತಾದವರು ಉಪಸ್ಥಿತರಿದ್ದರು.