ಕರ್ನಾಟಕ ಬಂದ್​ ಹಿನ್ನೆಲೆ ನೆಲಮಂಗಲ ಹೆದ್ದಾರಿಯಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿ ಕಡೆಯಿಂದ ಬರುವ ಸಾರಿಗೆ ಸಂಸ್ಥೆ ಬಸ್​ ಚಾಲಕರು ಮತ್ತು ನಿರ್ವಾಹಕರಿಗೆ ಹಾರ ಹಾಕಿ, ಶಾಲು ಹೊದಿಸಿ ಅಭಿನಂದಿಸಿ ಧೈರ್ಯ ಹೇಳಿದರು. ಕರವೇ ತಾಲೂಕು ಅಧ್ಯಕ್ಷ ಸುರೇಶ್​, ಸಮರ ಸೇನೆ ತಾಲೂಕು ಅಧ್ಯಕ್ಷ ಪುಟ್ಟಾಂಜನೇಯ, ಕರವೇ ನಗರ ಅಧ್ಯಕ್ಷ ಯಶವಂತ್​, ವಿದ್ಯಾರ್ಥಿ ಟಕ ಅಧ್ಯಕ್ಷ ಮಂಜುನಾಥ್​, ತಾಲೂಕು ಉಪಾಧ್ಯಕ್ಷ ಕೇಶವ್​, ರಂಗನಾಥ್​, ಕಾರ್ಮಿಕ ಟಕ ಉಪಾಧ್ಯಕ್ಷ ತಿಮ್ಮರಾಜು, ದಾಸನಪುರ ಅಧ್ಯಕ್ಷ ರವಿ ಸೊಂಡೆಕೊಪ್ಪ, ಮುಖಂಡ ಚೇತನ, ಚಂದ್ರಜಿರಾವ್​, ಖಾದರ್​, ಪ್ರಕಾಶ್​, ರವಿಕುಮಾರ್​ ಇದ್ದರು. 
ಜಿಲ್ಲೆ

ಬೆಳಗಾವಿಯಿಂದ ಬರುವ ಬಸ್​ ಚಾಲಕ, ನಿರ್ವಾಹಕರಿಗೆ ಸನ್ಮಾನ

ನೆಲಮಂಗಲ : ಸಾರಿಗೆ ಚಾಲಕರು ಮತ್ತು ನಿರ್ವಾಹಕರ ಮೇಲೆ ಶಿವಸೇನೆ, ಎಂಇಎಸ್​ ಮತ್ತು ಮರಾಠಿಗರು ನಡೆಸಿದ ಹಲ್ಲೆ, ದೌರ್ಜನ್ಯ ಖಂಡಿಸಿ ಕನ್ನಡಪರ ಸಂಟನೆಗಳು ಶನಿವಾರ ಕರೆನೀಡಿದ್ದ ಕರ್ನಾಟಕ ಬಂದ್​ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇತ್ತೀಚೆಗೆ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್​ ಚಾಲಕ ಮತ್ತು ನಿರ್ವಾಹಕರ ಮೇಲೆ ಶಿವಸೇನೆ, ಎಂಇಎಸ್​ ಮತ್ತು ಮರಾಠಿಗರು ನಡೆಸಿದ ದೌರ್ಜನ್ಯ ಖಂಡಿಸಿ ಮಾ.22ರಂದು ರಾಜ್ಯಾದ್ಯಂತ ಕರ್ನಾಟಕ ಬಂದ್​ಗೆ ವಿವಿಧ ಕನ್ನಡಪರ ಸಂಟನೆಗಳ ಮುಖಂಡರು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರ ಸೇರಿದಂತೆ ತಾಲೂಕಿನಾದ್ಯಂತ ಎಂದಿನಂತೆ ಜನರು ಬೀದಿಗಿಳಿದಿದ್ದರು. ಬಸ್​ ಸಂಚಾರ ಎಂದಿನಂತೆ ಇತ್ತು. ನಗರದ ಪೇಟೆ ಬೀದಿಯಲ್ಲಿ ವರ್ತಕರು ಅಂಗಡಿಗಳನ್ನು ತೆರೆದು ದಿನನಿತ್ಯದಂತೆ ಕರ್ತವ್ಯ ನಿರ್ವಹಿಸಿದ್ದರು. ಒಟ್ಟಾರೆ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ತಾಲೂಕಿನಲ್ಲಿ ಬಂದ್​ ನೀರಸವಾಗಿತ್ತು.

ಹೆದ್ದಾರಿ ತಡೆದು ಪ್ರತಿಭಟನೆ : ರಾಜ್ಯ ಬಂದ್​ ಕರೆ ಹಿನ್ನೆಲೆ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಸುರೇಶ್​ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರ ಬಳಿ ಸಮಾವೇಶಗೊಂಡು ಹೆದ್ದಾರಿ 48ರವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಕರವೇ ಕಾರ್ಯಕರ್ತರು ಬೆಳಗಾವಿ ಕಡೆಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಾರಿಗೆ ಬಸ್​ ಚಾಲಕ, ನಿರ್ವಾಹಕರಿಗೆ ಹಾರ, ತುರಾಯಿ ಹಾಗೂ ಶಾಲು ಹಾಕಿ ಅಭಿನಂದಿಸಿ ಆತ್ಮಸ್ಥೆ$ರ್ಯ ತುಂಬಿದರು. ಕರವೇ ತಾಲೂಕು ಅಧ್ಯಕ್ಷ ಸುರೇಶ್​ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ಶಿವಸೇನೆ, ಎಂಇಎಸ್​ ಮತ್ತು ಮರಾಠಿಗರು ನಿರಂತರವಾಗಿ ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡುತ್ತಿದ್ದಾರೆ. ಜತೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಗಡಿಭಾಗದ ಕನ್ನಡಿಗರ ಮೇಲೆ ನಿರಂತರವಾಗಿ ಮರಾಠಿಗರು ದೌರ್ಜನ್ಯ ಎಸಗುತ್ತಿದ್ದಾರೆ. ನೌಕರರ ಮೇಲೆ ಸುಳ್ಳು ದೂರು ನೀಡುವ ಮೂಲಕ ಪೋಕ್ಸೋ ಪ್ರಕರಣ ದಾಖಲು ಮಾಡುವಂತೆ ಮರಾಠಿಗ ಸಂಟನೆಗಳು ನೋಡಿಕೊಳ್ಳುತ್ತಿದ್ದು, ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು, ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.