ಜಿಲ್ಲೆ

ಗಡಿನಾಡ ಕನ್ನಡ ಹೋರಾಟಗಾರರಿಗೆ ಸನ್ಮಾನ

Bengaluru - General - Rama Kishan K V

ಬೆಂಗಳೂರು: ಕರ್ನಾಟಕ ನಾಮಕರಣ 50ರ ಸಂಭ್ರದ ಹಿನ್ನಲೆಯಲ್ಲಿ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಹೋರಾಟಗಾರರನ್ನು ಸನ್ಮಾನಿಸಲಾಯಿತು.

ಅಶೋಕ ಚಂದರಗಿ (ಬೆಳಗಾವಿ), ಅ,ಕೃ. ಸೋಮಶೇಖರ್​ (ಕೋಲಾರ), ಚಾ.ರಂ.ಶ್ರೀನಿವಾಸ ಗೌಡ (ಚಾಮರಾಜನಗರ), ಕೆ.ಜಿ. ಶರಣಪ್ಪ ಗದಲೇಗಾಂವ (ಬಸವ ಕಲ್ಯಾಣ) ಗಡಿನಾಡ ಕನ್ನಡಿಗರಾಗಿ ಸನ್ಮಾನಿತರಾದರು.

ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ನೆನಪಿನ ವಿಶೇಷ ಸಂಚಿಕೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಪಕ ಡಾ.ರಾಜಪ್ಪ ದಳವಾಯಿ ಬಿಡುಗಡೆ ಮಾಡಿದರು. ಹಿರಿಯ ಲೇಖಕ ಸತೀಶ್​ ಕುಲಕರ್ಣಿ, ಕರ್ನಾಟಕ ಲೇಖಕಿಯರ ಸಂದ ಅಧ್ಯೆ ಡಾ.ಎಚ್​.ಎಲ್​.ಪುಷ್ಪ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮತ್ತಿತರರಿದ್ದರು.