ಜಿಲ್ಲೆ

ಮೂಡುಬಿದಿರೆ ಭಟ್ಟಾರಕ ಸ್ವಾಮಿಜಿಗೆ ಗೌರವ ಪ್ರದಾನ

ಸೌಮ್ಯ ಆರ್

ಮೂಡುಬಿದಿರೆ: ಮಹಾರಾಷ್ಟ್ರದ ಜೈಸಿಂಗ್‌ಪುರ ಬಳಿಯ ಶ್ರೀ ಜೈನ ಮಠದಲ್ಲಿ 108 ವಿಶುದ್ದ ಸಾಗರ ಮುನಿ ರಾಜರ ಉಪಸ್ಥಿತಿಯಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತ ವಸ್ತುತ್ವ ಮಹಾ ಕಾವ್ಯ ಭಟ್ಟಾರಕ ಸಂಗೋಷ್ಠಿಯಲ್ಲಿ ಮೂಡುಬಿದಿರೆ ಜೈನಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಅವರನ್ನು ವಿಶ್ವಪ್ರಿಯ ವಿದ್ಯಾಧರ ಬಿರುದಿನೊಂದಿಗೆ ಗೌರವಿಸಲಾಯಿತು.

ಜಿನ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ವಿನಯಾಂಜಲಿ ಅರ್ಪಿಸಿದರು. ಸಜಾಲ್ ಜೈನ್, ಕಿಶೋರ್, ಹೈದರಾಬಾದ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ, ಕರ್ನಾಟಕ ಮೊದಲಾದ ಕಡೆಗಳಿಂದ ಬಂದ ವಿದ್ವಾಂಸರು ಉಪಸ್ಥಿತರಿದ್ದರು.