ಜಿಲ್ಲೆ

ಅಮೃತ ಭಾರತಿಯ ಅಮೂಲ್ಯ ಹೆಗ್ಡೆಗೆ ಸನ್ಮಾನ

ಇಂದಿರಾ ಎನ್ ಕೆ

ಹೆಬ್ರಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಮಾರ್ಗದರ್ಶನದಲ್ಲಿ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆಯನ್ನು ಪ್ರತಿನಿಧಿಸಿ ಜಪಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ ಅಮೂಲ್ಯಾ ಹೆಗ್ಡೆ ಅವರನ್ನು ಅಮೃತ ಭಾರತಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಬೈರಂಪಳ್ಳಿಯ ಅರುಣ್ ಹೆಗ್ಡೆ, ಅನಿತಾ ಹೆಗ್ಡೆ ಪುತ್ರಿಯಾಗಿರುವ ಈಕೆ ಹೆಬ್ರಿ ಅಮೃತ ಭಾರತಿ ಪದವಿ ಪೂರ್ವ ಕಾಲೇಜಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ವಿಶ್ವಸ್ಥರಾದ ವಿಷ್ಣುಮೂರ್ತಿ ನಾಯಕ್, ಪ್ರಾಂಶುಪಾಲ ಪ್ರಕಾಶ್ ಜೋಗಿ, ಪಿಆರ್‌ಒ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಆಂಗ್ಲ ಭಾಷೆ ಉಪನ್ಯಾಸಕಿ ಚಂದ್ರಕಲಾ ನಿರೂಪಿಸಿದರು.