ಜಿಲ್ಲೆ

ಸಾಧಕರಿಗೆ ಗೌರವ ಸಮರ್ಪಣೆ

Davangere - Desk - Mahesh Babu E

ಹಿರಿಯೂರು: ಕೃಷಿಕರ ಮಾಹಿತಿ ಕಣಜ-ಶತಮಾನದ ಇತಿಹಾಸ ವಿರುವ ವಲಯ ಕೃಷಿ ವಿಜ್ಞಾನ-ಸಂಶೋಧನಾ ಕೇಂದ್ರದ ಪ್ರಗತಿಗೆ ಶ್ರಮಿಸಿದ ನಿವೃತ್ತ ಅಧಿಕಾರಿಗಳನ್ನು ಶತಮಾನೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೌರವಿಸಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗಳಾದ ಸಂಗಪ್ಪ, ಕೆ.ಪಿ.ವಿಶ್ವನಾಥ್, ಪ್ರೊ.ಚಂದ್ರಪ್ಪ, ಕೆ.ಟಿ.ರಾಜೇಂದ್ರಪ್ರಸಾದ್, ಲಲ್ಯನಾಯಕ್, ಗೌರಮ್ಮ ಅವರನ್ನು ಸನ್ಮಾನಿಸಲಾಯಿತು.

ಸಚಿವರಾದ ಡಿ.ಸುಧಾಕರ್, ಚೆಲುವರಾಯ ಸ್ವಾಮಿ, ಕುಲಪತಿ ಡಾ.ಜಗದೀಶ್, ಡೀನ್ ಡಾ. ಮಂಜಪ್ಪ, ಡಾ. ಒ. ಕುಮಾರ್ ಇದ್ದರು.