ಜಿಲ್ಲೆ

ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕಾರ್ಯಕ್ರಮ ಶ್ಲಾಘನೀಯ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ತಂತ್ರಜ್ಞಾನ ಎಂಬ ಮಾಯಾ ಲೋಕದಲ್ಲಿ ಸಿಲುಕುತ್ತಿದ್ದಾರೆ. ಅದರಿಂದ ಹೊರಬಂದು ಉತ್ತಮ ನಾಗರಿಕನಾಗಬೇಕು. ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವ ಕಾರ್ಯಕ್ರಮ ಅಣ್ಣಿಗೇರಿ ಸೇವಾ ಟ್ರಸ್ಟ್ನಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದು ಡಾ. ಸುರೇಶ ತುವಾರ ಹೇಳಿದರು.
ನಗರದ ವೈ.ಬಿ. ಅಣ್ಣಿಗೇರಿ ವಾಣಿಜ್ಯ ಪದವಿ ಮಹಾವಿದ್ಯಾಲಯದ 2024- 25ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಮತ್ತು ಪಾಲಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ಮುಂದೆ ಗುರಿ ಇದ್ದರೆ ಹಿಂದೆ ಗುರು ಇರುತ್ತಾನೆ. ಪಾಲಕರೂ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನಾಗೇಶ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿಗಳ ದಾರಿ ಸರಳವಾಗಬೇಕಾದರೆ ಪ್ರರಿಶ್ರಮ ಬಹಳ ಮುಖ್ಯ ಎಂದರು.
ಪ್ರೊ. ಬಸವರಾಜ ಉಡಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಮಹಾಬಳೇಶ್ವರಯ್ಯ, ಸಚಿನ್ ಕಮತೆ, ಪದವಿ ಕಾಲೇಜು ಪ್ರಾಚಾರ್ಯ ನಿತ್ಯಾನಂದ ಖಾತಗಾರ, ಇತರರಿದ್ದರು.
ನವರಾತ್ರಿ ಅಂಗವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ನೆರವೇರಿಸಿದರು. ಶ್ವೇತಾ ಮÁಳಿ ವಂದಿಸಿದರು.