ಕಸ ಹಾಕಿರುವ ಜಾಗದಲ್ಲಿ ಶ್ರದ್ಧಾಂಜಲಿ ಕಟೌಟ್. 
ಜಿಲ್ಲೆ

ಕಸ ಹಾಕೋದನ್ನು ನಿಯಂತ್ರಿಸಲು ಶ್ರದ್ಧಾಂಜಲಿ ಕಟೌಟ್!

ಆನೇಕಲ್: ಚಂದಾಪುರ ಪುರಸಭೆ 11ನೇ ವಾರ್ಡ್ ನ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ತಪ್ಪಿಸಲು ಪುರಸಭೆ ಸದಸ್ಯರು ಕಸ ಎಸೆಯುವವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಪ್ಲೆಕ್ಸ್ ಹಾಕಿಸುವ ಮೂಲಕ ಕಸ ಹಾಕುವುದನ್ನು ತಡೆಯಲು ಅನುಸರಿಸಿದ ಹೊಸ ಕ್ರಮ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಹೌದು..! ಚಂದಾಪುರ ಪುರಸಭೆ 11 ವಾರ್ಡ್ ರಸ್ತೆ ಬದಿಯಲ್ಲಿ ಸಾರ್ವಜನಿಕರು ಕಸ ಹಾಕುತ್ತಿದ್ದರು. ಹಲವಾರು ಬಾರಿ ಪುರಸಭೆಯಿಂದ ಜಾಗೃತಿ ಮೂಡಿಸಿದರೂ ಉಪಯೋಗವಾಗಿಲ್ಲ. ಈ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯೆ ಶೋಭಾ ಚರಣ್ ಕಸ ಎಸೆಯುವವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹಾಕಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಸೂಚನೆ ನೀಡಲಾಗಿದೆ. ಕಸ ಎಸೆಯುವವರ ವಿರುದ್ಧ ಕ್ರಮ ವಹಿಸುವ ಬಗ್ಗೆಯೂ ತಿಳಿಸಲಾಗಿದೆ. ಸ್ವಚ್ಛತೆ ಕಾಪಾಡಬೇಕಾದುದ್ದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ 11ನೇ ವಾರ್ಡ್ ಜನತೆ ರಸ್ತೆ ಬದಿಯಲ್ಲಿ ಕಸ ಎಸೆಯಬಾರದು. ಕಸದ ಬ್ಲಾಕ್ ಸ್ಪಾಟ್ ಆಗಿದ್ದು, ಮುಂದಿನ ದಿನಗಳಲ್ಲಿ ಕಸದ ಸಮಸ್ಯೆ ನಿವಾರಣೆ ಕ್ರಮ ವಹಿಸಲಾಗವುದು.

ಶೋಭಾ ಚರಣ್ ಪುರಸಭೆ ಸದಸ್ಯೆ