ಕಿಕ್ಕೇರಿ: ಹೋಬಳಿಯ ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಗಾಳಿ ಮಳೆಗೆ ಮರಗಳು ಉರುಳಿವೆ.
ಮಾಕವಳ್ಳಿ ಗ್ರಾಮದಲ್ಲಿ ರಸ್ತೆಗೆ ಬೃಹತ್ ಮರ ಅಡ್ಡಲಾಗಿ ಉರುಳಿ ಬಿದ್ದ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಯಿತು. ಆರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.
ಕೋಡಿಮಾರನಹಳ್ಳಿ, ಮಾದಾಪುರ ರಸ್ತೆಯಲ್ಲಿ ಮರಗಳ ರೆಂಬೆ ಮುರಿದು ಬಿದ್ದು ಓಡಾಟಕ್ಕೆ ಅಡಚಣೆಯಾಯಿತು. ನಾಲ್ಕೈದು ಗಂಟೆಗಳ ಕಾಲ ಸುರಿದ ಮಳೆಯಿಂದ ಬಹುತೇಕ ಭೂಮಿ ತಂಪಾಯಿತು. ಮೋರಿಗಳ ಮೇಲೆ ನೀರು ಹರಿಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.