ಜಿಲ್ಲೆ

ಬೇವಿನಮರದಲ್ಲಿ ಸೋರುತ್ತಿದೆ ಹಾಲಿನ ನೊರೆ

ಧನಂಜಯ ಎಸ್.ಹಕಾರಿ.

ಕೊಂಡ್ಲಹಳ್ಳಿ: ಇಲ್ಲಿನ ಬಿ.ಜಿ.ಕೆರೆಯಲ್ಲಿನ ಬೇವಿನ ಮರದಲ್ಲಿ ಬಿಳಿಯ ಹಾಲಿನ ನೊರೆ ಬರುತ್ತಿರುವುದು ಆಶ್ಚರ್ಯ ಮೂಡಿಸಿದೆ.

ಚಳ್ಳಕೆರೆ ರಸ್ತೆಯ ಯರಬಳ್ಳಿ ಮಾರಮ್ಮ ದೇವಸ್ಥಾನದ ಸಮೀಪದಲ್ಲಿನ ಬೇವಿನಮರದಲ್ಲಿ ಶ್ರಾವಣದ ಮಾಸದ ಅಮಾವಾಸ್ಯೆಯಿಂದ ನಿರಂತರವಾಗಿ ದ್ರವ ರೂಪದ ಬಿಳಿ ನೊರೆ ಹೊರಬರುತ್ತಿದೆ.

ಗೌರಸಮುದ್ರ ಮಾರಮ್ಮ ಜಾತ್ರೆಯ ಮುನ್ನಾ ದಿನದಂದು ಕಾಣಿಸಿಕೊಂಡಿದ್ದ ದೃಶ್ಯವು ದೈವಿಕ ಸ್ವರೂಪವಾಗಿ ಪರಿಗಣಿಸಿದೆ.

ಜಾತ್ರೆಗೆ ಹೋಗಿ ಬಂದ ಭಕ್ತರು ಹಾಗೂ ಬಿ.ಜಿ.ಕೆರೆ ಸುತ್ತಮುತ್ತಲಿನ ಗ್ರಾಮಗಳ ಜನರು ಬೇವಿನಮರ ನೋಡಲು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಈ ಮರಕ್ಕೆ ಸೀರೆಯನ್ನು ಸುತ್ತಿ ಪೂಜೆ ನಡೆಸಲಾಗುತ್ತಿದೆ.

ಗ್ರಾಮದ ನಿವೃತ್ತ ಉಪನ್ಯಾಸಕ ಕೆ.ಎಚ್.ಸುರೇಶ್ ಮಾತನಾಡಿ, ಬೇವಿನಮರದಿಂದ ಹೊರಬರುತ್ತಿರುವ ಬಿಳಿಯ ಹಾಲಿನಂತಹ ದ್ರವವನ್ನು ದೈವಿ ಸ್ವರೂಪ ಎಂದು ಸ್ಥಳೀಯರು ಭಾವಿಸಿದ್ದಾರೆ.

ಬೇವಿನ ಮರದಿಂದ ಬರುತ್ತಿರುವ ಬಿಳಿ ನೊರೆಯ ಬಗ್ಗೆ ತಜ್ಞರು, ಸಂಶೋಧಕರು ಗಮಹರಿಸಿ ಸತ್ಯ ತಿಳಿಸಿಕೊಡಬೇಕು ಎಂದರು.