ಕಾರ್ಕಳ: ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುಂಟರ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ಮಾಳ, ಕೆರುವಾಶೆ ಪ್ರದೇಶಗಳಲ್ಲಿ ಅಡಕೆ ಮರಗಳು ಧರಾಶಾಯಿಯಾಗಿವೆ. ಕೆರುವಾಶೆ ಗ್ರಾಮದ ಜಯಪುರ ಮೈಯದಿ ಎಂಬುವರ ತೋಟದಲ್ಲಿ ಸುಮಾರು 45ಕ್ಕೂ ಹೆಚ್ಚು ಅಡಕೆ ಮರಗಳು ಮುರಿದು ಬಿದ್ದಿದ್ದು 25 ಸಾವಿರಕ್ಕೂ ಅಧಿಕ ಪ್ರಮಾಣದ ನಷ್ಟ ಸಂಭವಿಸಿದೆ. ಕಾರ್ಕಳದ ಅನಿತಾ ಪ್ರವೀಣ್ ಪಾಂಡಿ ಎಂಬುವರ ತೋಟದಲ್ಲಿ ಸುಮಾರು 40 ಅಡಕೆ ಮರಗಳು ಹಾನಿಯಾಗಿದ್ದು, 20 ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ. ಕಾರ್ಕಳ ನಗರ ಸೇರಿದಂತೆ ತಾಲೂಕಿನ ನಿಟ್ಟೆ, ಅತ್ತೂರು ಕಾಬೆಟ್ಟು, ಶಿರ್ಲಾಲು, ಬಜಗೋಳಿ ಸೇರಿದಂತೆ ನಾನಾ ಕಡೆಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ.