ಜಿಲ್ಲೆ

ಅರಳಿ ಮರ ಸ್ಥಳಾಂತರಿಸಿದ ವಸುಂಧರೆ

Dharwad

ಹುಬ್ಬಳ್ಳಿ: ಕಳೆದ ಮೂರು ವರ್ಷಗಳಿಂದ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆದಿದ್ದ ಅರಳಿ ಮರವನ್ನು ವಸುಂಧರಾ ಫೌಂಡೇಷನ್​ ತಂಡದ ಸದಸ್ಯರು ಸುರತವಾಗಿ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಅರಣ್ಯ ಇಲಾಖೆಯ ನರ್ಸರಿಯಲ್ಲಿ ಅರಳಿ ಸಸಿಯೊಂದು ಬೆಳೆದು ದೊಡ್ಡದಾಗಿತ್ತು. ಇದನ್ನು ವಸುಂಧರಾ ೌಂಡೇಶನ್​ ಅಧ್ಯಕ್ಷ ಮೇರಾಜ ಕೆರೂರ ಗಮನಿಸಿದ್ದರು. ಇಲಾಖೆ ಗಮನಕ್ಕೆ ತಂದು ಸುರತವಾಗಿ ಬೇರೆಡೆ ಸ್ಥಳಾಂತರಿಸಲು ಚಿಂತನೆ ನಡೆಸಿದರು.
ಮರ, ಗಿಡಗಳ ಸ್ಥಳಾಂತರ ಪ್ರಕ್ರಿಯೆಯಲ್ಲಿ ಪರಿಣಿತಿ ಹೊಂದಿರುವ ಧಾರವಾಡದ ಪರಿಸರ ಪ್ರೇಮಿ ಅಸ್ಲಂ ಜಹಾನ್​ ಅವರ ಮಾರ್ಗದರ್ಶನದಲ್ಲಿ ಈ ಮರವನ್ನು ಬೇರುಸಮೇತ ಕಿತ್ತು, ದೇವಾಂಗಪೇಟೆಯ ರುದ್ರಭೂಮಿಯಲ್ಲಿ ನೆಡುವಲ್ಲಿ ಸಲರಾದರು. ಈ ಕಾರ್ಯಕ್ಕೆ ವಸಂತ ಅಗಸಿಮನಿ ಸೇರಿದಂತೆ ಇತರರು ಕೈಜೋಡಿಸಿದ್ದರು.