ದೇವಸ್ಯಪಡೂರು ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಸೀನಿಯರ್ ಆದಿರಾಜ ಜೈನ್, ಜಯಾನಂದ ಪೆರಾಜೆ ಹಲವರು ಇದ್ದರು. 
ಜಿಲ್ಲೆ

ಹಸಿರು ಸಮಲತೋಲನಕ್ಕೆ ಸಹಕರಿಸಿ : ಸೀನಿಯರ್ ಆದಿರಾಜ ಜೈನ್ ಕರೆ

ಸೌಮ್ಯ ಆರ್

ಬಂಟ್ವಾಳ: ಪ್ರತಿಯೊಬ್ಬರೂ ತಲಾ ಒಂದು ಗಿಡ ನೆಟ್ಟು ಹಸಿರಿನ ಸಮತೋಲನಕ್ಕೆ ಸಹಕರಿಸಬೇಕು. ಜತೆಗೆ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವುದು ಅಗತ್ಯ ಎಂದು ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಸೀನಿಯರ್ ಆದಿರಾಜ ಜೈನ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದೇವಸ್ಯಪಡೂರು ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಪರಿಸರದಲ್ಲಿ ಹಲಸು, ಸಾಗುವಾನಿ, ಮೆಕೆಡೆಮಿಯ ಗಿಡಗಳನ್ನು ನೆಡಲಾಯಿತು. ಸೀನಿಯರ್ ಛೇಂಬರ್ ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ, ಉಪಾಧ್ಯಕ್ಷೆ ಶೈಲಜಾ ರಾಜೇಶ್, ಕೃಷಿಕರಾದ ಸಂಪತ್ ಕುಮಾರ್, ಪುಷ್ಪರಾಜ, ಶಾಂತಿಪ್ರಸಾದ್, ಶ್ರೇಯಾಂಶ ಜೈನ್ ಅಟ್ಲಬೆಟ್ಟು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಾಂತಿ ಸ್ವಾಗತಿಸಿದರು. ಶಿಕ್ಷಕಿ ಗೀತಾ ವಂದಿಸಿದರು.