ಜಿಲ್ಲೆ

ತಾವು ಕಲಿತ ಶಾಲೆ ಆವರಣದಲ್ಲಿ 21 ಬಗೆಯ ಸಸಿಗಳನ್ನು ನೆಟ್ಟ ಹಳೇ ವಿದ್ಯಾರ್ಥಿಗಳು

ಕೃಷ್ಣ ಕುಲಕರ್ಣಿ

ಆಳಂದ: ತಾಲೂಕಿನ ತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಸಸಿ ನೆಟ್ಟು, ಪರಿಸರ ಸಂರಕ್ಷಣೆ ಬಗ್ಗೆ ಭಾನುವಾರ ಅರಿವು ಮೂಡಿಸಿದರು.

ಪ್ರಮುಖರು ಮಾತನಾಡಿ, ಇಂದಿನ ಸ್ಥಿತಿಯಲ್ಲಿ ಅರಣ್ಯ ಉಳಿಸಿ, ಬೆಳೆಸುವುದು ಅವಶ್ಯವಾಗಿದೆ. ಪ್ರತಿಯೊಬ್ಬರೂ ಮನೆಯ ಮುಂದೆ ಒಂದು ಸಸಿಯನ್ನು ನೆಟ್ಟು ಪೋಷಣೆ ಮಾಡಬೇಕು. ಅಂದಾಗಲೇ ತಾಪಮಾನ ಕಡಿಮೆ ಮಾಡಬಹುದು. ಯುವಕರು ಹಾಗೂ ವಿದ್ಯಾರ್ಥಿಗಳ ಅರಣ್ಯ ಸಂರಕ್ಷಣೆಯ ಬಗ್ಗೆ ಎಲ್ಲರಿಗೂ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ವಿವಿಧ ತಳಿಯ 21 ಸಸಿಗಳನ್ನು ನೆಡಲಾಯಿತು. ಗ್ರಾಪಂ ಸದಸ್ಯರಾದ ಯಶವಂತರಾವ ಪಾಟೀಲ್, ದಯಾನಂದ ಲೋಕಾಣೆ, ಚನ್ನಪ್ಪ ಬದಲೋ, ಚಿಂದನಂದ ಕಾಂಬಳೆ, ಎಸ್‌ಡಿಎಂಸಿ ಅಧ್ಯಕ್ಷ್ಯ ಗಂಗಾಧರ್ ಪಾಟೀಲ್, ಹಳೆಯ ವಿದ್ಯಾರ್ಥಿಗಳು ಅನಿಲ್ ಹೋಡಲೆ, ಶ್ರೀಶೈಲ ಬೇಲೂರೆ, ಮಹಾವೀರ ಲೋಕಾಣೆ, ಶಿವಪ್ಪ ಪೂಜಾರಿ, ಲಕ್ಷ್ಮಣ ಬೇಲೂರೆ, ವಿಲಾಸ ಜವಳಿ, ಬೀರಣ್ಣ ಪೂಜಾರಿ ಇತರರಿದ್ದರು.