ಜಿಲ್ಲೆ

ಪರಿಸರ ಬಗ್ಗೆ ಕಾಳಜಿ ಅವಶ್ಯ : ವಲಯಾರಣ್ಯಾಧಿಕಾರಿ ಸಂಧ್ಯಾ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಪರಿಸರದ ಬಗ್ಗೆ ಕಾಳಜಿ, ಪ್ರೀತಿ ಹೊಂದಿರಬೇಕು. ಅರಣ್ಯ ಸಂರಕ್ಷಣೆ, ಸಮೃದ್ಧಿಗೆ ಮನಸ್ಸು ಮಾಡಬೇಕು. ಅರಣ್ಯದಂಚಿನಲ್ಲಿರುವ ಬರಡು ಭೂಮಿ, ಖಾಲಿ ಪ್ರದೇಶಗಳಲ್ಲಿ ಹಣ್ಣಿನ ಗಿಡ ನೆಡಬೇಕು. ಇದು ಮುಂದೆ ಕಾಡು ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸುವ ಕಾರ್ಯ ಮಾಡುತ್ತದೆ. ಇದರಿಂದ ಕಾಡುಪ್ರಾಣಿ ನಾಡಿಗೆ ಬರುವುದು ಕಡಿಮೆಯಾಗುತ್ತದೆ ಎಂದು ಪಂಜ ವಲಯಾರಣ್ಯಾಧಿಕಾರಿ ಸಂಧ್ಯಾ ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಡಾ.ರವಿ ಕಕ್ಕೆಪದವು, ಸಮಾಜ ಸೇವಾ ಟ್ರಸ್ಟ್, ಸುಬ್ರಹ್ಮಣ್ಯ ರೋಟರಿ ಕ್ಲಬ್, ಕುಕ್ಕೆಶ್ರೀ ಅಟೋ ಚಾಲಕ ಮಾಲೀಕರ ಸಂಘ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಕುಮಾರಧಾರಾದಲ್ಲಿ ನಡೆದ ವೃಕ್ಷಾರೋಪಣ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್ ಚೇಂಬರ್‌ನ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯ, ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್, ಸೀನಿಯರ್ ಚೇಂಬರ್ ರಾಷ್ಟ್ರೀಯ ಸಂಯೋಜಕ ಕಿಶೋರ್ ಫರ್ನಾಂಡಿಸ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್., ಸುಬ್ರಹ್ಮಣ್ಯ ಠಾಣೆ ಎಎಸ್‌ಐ ದನೇಶ್, ಮುಖ್ಯ ಪೇದೆ ಪ್ರಮೀಳಾ, ಉಪವಲಯಾರಣ್ಯಾಧಿಕಾರಿ ಮಹಮ್ಮದ್ ಮೆಹಬೂಬ, ವನಪಾಲಕ ಧರಣಪ್ಪ, ಅರಣ್ಯ ವೀಕ್ಷಕ ಗಣೇಶ ಹೆಗಡೆ ಮುಖ್ಯ ಅತಿಥಿಗಳಾಗಿದ್ದರು.

ಕುಕ್ಕೆ ಶ್ರೀ ಆಟೋ ಚಾಲಕ ಮಾಲೀಕರ ಸಂಘ ಅಧ್ಯಕ್ಷ ಸಂತೋಷ್ ಕುಲ್ಕುಂದ, ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್, ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟೇಶ್ ಎಚ್.ಎಲ್., ಸೀನಿಯರೇಟ್ ಅಧ್ಯಕ್ಷೆ ಲೀಲಾಕುಮಾರಿ ವಿಶ್ವನಾಥ್, ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ಮೋನಪ್ಪ ಡಿ., ಕೋಶಾಧಿಕಾರಿ ಪ್ರಕಾಶ್ ಕೆ.ಎಸ್. ಉಪಸ್ಥಿತರಿದ್ದರು.

150 ಗಿಡ ನಾಟಿ

ವಲಯಾರಣ್ಯಾಧಿಕಾರಿ ಸಂಧ್ಯಾ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ದೋಣಿಮಕ್ಕಿಯ ಬರಡು ಭೂಮಿಯಲ್ಲಿ ಕುಕ್ಕೆ ಶ್ರೀ ಆಟೋ ಚಾಲಕ ಸಂಘದ ಸದಸ್ಯರು, ಡಾ.ರವಿ ಕಕ್ಕೆಪದವು, ಸಮಾಜ ಸೇವಾ ಟ್ರಸ್ಟ್ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು 150ಕ್ಕೂ ಅಧಿಕ ಗಿಡ ನೆಟ್ಟರು.