ಹುಬ್ಬಳ್ಳಿ: ಇಲ್ಲಿಯ ದೈವಜ್ಞ ಬ್ರಾಹ್ಮಣ ಯುವಕ ಸಂಘದ ವತಿಯಿಂದ ಸಮಾಜದ ನೂತನ ಶಾಲೆ ಕಟ್ಟಡದ ಆವರಣದಲ್ಲಿ ಮಂಗಳವಾರ ಗಿಡ ನೆಡುವ (ವೃಕ್ಷಾರೋಪಣ) ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಜಯ ವೆರ್ಣೇಕರ್ ಹಾಗೂ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವಿವೇಕ ಅಣವೇಕರ ಅವರು ವೃಕ್ಷಾರೋಪಣಕ್ಕೆ ಚಾಲನೆ ನೀಡಿದರು. ಕರ್ಕಿ ಮಠಕ್ಕೆ ಸೇವೆ ಸಲ್ಲಿಸಲು ಕಾಣಿಕೆ ಡಬ್ಬಿಯನ್ನು ಯುವಕ ಸಂಘದ ಪದಾಧಿಕಾರಿಗಳಿಗೆ ನೀಡಲಾಯಿತು.
ದೈವಜ್ಞ ವಿದ್ಯಾವರ್ಧಕ ಸಂಘ ಮತ್ತು ದೈವಜ್ಞ ಯುವಕ ಸಂಘಗಳು ನಮ್ಮ ಹುಬ್ಬಳ್ಳಿಯ ಪ್ರಕೃತಿಯನ್ನು ಅಖಂಡವಾಗಿಟ್ಟುಕೊಂಡು ಅಭಿವೃದ್ಧಿಯ ಜತೆಗೆ ಹಸಿರು ಉಳಿಸಿ, ಬೆಳೆಸುವ ಯೋಜನೆ ಹಾಕಿಕೊಂಡಿವೆ ಎಂದು ಪದಾಧಿಕಾರಿಗಳು ಹೇಳಿದರು.
ಯುವಕ ಸಂಘದ ಉದಯ ವೆರ್ಣೇಕರ್, ಸಂಜೀವ ಪುತಲೇಕರ್, ಮಾರುತಿ ರೇವಣಕರ್, ಮಂಜುನಾಥ ಸಾಮನೆಕರ್, ಸಂತೋಷ ವೆರ್ಣೇಕರ್, ಪುನೀತ ಶೇಟ್, ಸಚಿನ್ ಗಾಂವಕರ್, ಗಿರೀಶ ರೇವಣಕರ್, ಸಂಘದ ಮಾಜಿ ಅಧ್ಯಕ್ಷ ರಾಜೇಶ್ ಭಟ್, ಸಂದೀಪ ಅಣವೇಕರ್, ಕುಂದನ್ ವೆರ್ಣೇಕರ್ ಮತ್ತು ವಿದ್ಯಾವರ್ಧಕ ಸಂಘದ ಉದಯ ರೇವಣಕರ್, ವಿನೋದ ರೇವಣಕರ್, ಗುರುನಾಥ ವೆರ್ಣೇಕರ್, ರಾಜೇಶ್ ಗಾಂವಕರ್ ಹಾಗೂ ಡಾ. ಗಣೇಶ ವೆರ್ಣೇಕರ್, ಮ್ಯಾನೇಜರ್ ವೆಂಕಟೇಶ ರಾಯ್ಕರ ಉಪಸ್ಥಿತರಿದ್ದರು.