ಜಿಲ್ಲೆ

Tree felling 10 ಜನ ಕಾಡುಗಳ್ಳರ ಬಂಧನ

ಹಳಿಯಾಳ: ಕಾಡಿನಲ್ಲಿ ಅಕ್ರಮ ನಾಟಾ ಕಡಿತ ಮಾಡಿ( Tree felling)  ಸಾಗಣೆ ಮಾಡುತ್ತಿದ್ದ 10 ಜನರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರಿಂದ 0. 672 ಕ್ಯೂಬಿಕ್ ಮೀಟರ್ ಸಾಗವಾನಿ ನಾಟಾ, ವಾಹನ ಸೇರಿ 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಜಮನಾಳ ತಾಂಡಾದ ಕಾಳಗಿನಕೊಪ್ಪ ಕ್ರಾಸ್ ಹತ್ತಿರ ಗುರುವಾರ ಕಾವಲು ಕಾಯುವ ವೇಳೆ ಬ್ಯಾಟರಿ ಬೆಳಕು ಕಂಡು ಪರಿಶೀಲಿಸಿದಾಗ ಬುಲೆರೋ ಪಿಕಪ್, ಮಾರುತಿ ಸ್ವಿಫ್ಟ್ ಕಾರು ಹಾಗೂ ಎರಡು ಬೈಕ್‌ನಲ್ಲಿ ಬಂದ 14 ಜನರು ನಾಟಾ ಕೊಯ್ದು ಯತ್ನಿಸುತ್ತಿರುವುದು ಕಂಡುಬಂದಿದ್ದು, 10 ಜನರನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ನಡೆದಿದೆ.

Tree felling ಮಾಡಿದವರನ್ನು ಹಿಡಿದವರಿವರು

ಹಳಿಯಾಳ ಡಿಎಫ್‌ಒ ಪ್ರಶಾಂತ ಕುಮಾರ ಕೆ.ಸಿ., ಎಸಿಎಫ್ ಮಾಜಿ ಬೀರಪ್ಪ ಅವರ ಮಾರ್ಗದರ್ಶನದಲ್ಲಿ ಸಾಂಬ್ರಾಣಿ ಆರ್‌ಎಫ್‌ಒ ಸಂಗಮೇಶ ಪಾಟೀಲ, ಡಿಆರ್‌ಎಫ್‌ಒಗಳಾದ ಬಸವರಾಜ ಪೂಜಾರಿ, ಚಿದಾನಂದ ಬಡಿಗೇರ, ಷಣ್ಮುಖ ಹವಳಗಿ,ಮಹಾಂತೇಶ ಬಳಬಟ್ಟಿ, ಹನುಮಂತ ಚೌಗಲಾ ಗಸ್ತು ಅರಣ್ಯ ಪಾಲಕರಾದ ವಿಠ್ಠಲ ಶೋಧೆನ್ನವರ, ರೇವಣಸಿದ್ದ, ಸಲೀಮ ರೋಣದ, ಈರಪ್ಪಾ ಹೊಂಗಲ, ವಿನಾಯಕ ಸೊಲಬಣ್ಣವರ ಹಾಗೂ ಜೆ.ಎಚ್.ಮುಲ್ಲಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.