ಹಾನಗಲ್ಲ: ಮಳೆಯ ಗಾಳಿಗೆ ಅರಳಿಮರ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಕುರುಬಗೇರಿ ಓಣಿಯಲ್ಲಿ ನಡೆದಿದೆ.
ಫಕ್ಕೀರಪ್ಪ ಪಾಂಡಪ್ಪ ಕೊಪ್ಪರಿಸಿಕೊಪ್ಪ (49) ಮೃತ ವ್ಯಕ್ತಿ.
ಇವರು ಅರಳಿಮರದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದಾಗ ಗಾಳಿಗೆ ಮರ ಬಿದ್ದಿದೆ. ಇದರಿಂದ ಕೆಳಗೆ ಸಿಲುಕಿಕೊಂಡು ಫಕ್ಕೀರಪ್ಪ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.