ಜಿಲ್ಲೆ

ರಸ್ತೆಗೆ ಉರುಳಿ ಬಿದ್ದ ಬೃಹತ್​ ಮರ; ಬೈಕ್​ ಸವಾರನಿಗೆ ಗಂಭೀರ ಗಾಯ

Webdesk - Manjunatha B

ಬೆಂಗಳೂರು: ಬೃಹತ್​ ಗಾತ್ರದ ಮರವೊಂದು ರಸ್ತೆಗುರುಳಿದ ಪರಿಣಾಮ ಎಂಟು ಕಾರುಗಳು ಜಖಂಡಗೊಂಡು ಓರ್ವ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ನಗರದ ಹೈಗ್ರೌಂಡ್ಸ್​ ಪೊಲೀಸ್​ ಠಾಣೆ ಬಳಿ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಬೈಕ್​ ಸವಾರ ರಾಜೇಶ್​(18) ಸೊಂಟದ ಮೇಲೆ ಮರ ಬಿದ್ದಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರಿನಲ್ಲಿದ್ದವರಿಗೂ ಸಹ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯೂ ಚಂದ್ರಿಕಾ ಜಂಕ್ಷನ್​​ ಬಳಿ ನಡೆದಿದ್ದು, 50 ವರ್ಷದ ಹಳೆಯ ಮರ ಏಕಾಏಖಿ ಉರುಳಿದ ಪರಿಣಾಮ ಅದರ ಅಡಿಯಲ್ಲಿ ಐದು ಕಾರುಗಳು ಹಾಗೂ ಮೂರು ಬೈಕುಗಳು ಸಿಲುಕಿವೆ. ಚಂದ್ರಿಕಾ ಜಂಕ್ಷನ್​ಗೆ ಕನೆಕ್ಟ್​ ಆಗೋ ರಸ್ತೆಗಳಲ್ಲಿ ಸಂಚಾರ ಬಂದ್​ ಮಾಡಲಾಗಿದ್ದು, ಪರ್ಯಾಯ ಮಾರ್ಗವನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

ಇತ್ತ ಮರ ಬಿದ್ದಿರುವ ಜಾಗದಲ್ಲಿ ಸ್ಥಳೀಯ ಯುವಕರು ಬಿಬಿಎಂಪಿ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.