Oplus_131072 
ಜಿಲ್ಲೆ

ಜೋರು ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ

ಕಿರಣ್ ಗೌಡ.ಜಿ

ಯಳಂದೂರು: ತಾಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಜೋರು ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು, ಮರಗಳು, ಧರೆಗುರುಳಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಪಟ್ಟಣವೂ ಸೇರಿದಂತೆ ತಾಲೂಕಿನ ಯರಿಯೂರು, ಹೊನ್ನೂರು, ಕೆಸ್ತೂರು, ಕಂದಹಳ್ಳಿ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ಅನೇಕ ಕಡೆ ಗುಡುಗು, ಮಿಂಚು ಸಹಿತ ಜೋರು ಮಳೆಯಾಯಿತು. ಕೆಸ್ತೂರು ಗ್ರಾಮದ ಮುಖ್ಯ ರಸ್ತೆಯಲ್ಲಿ 6 ವಿದ್ಯುತ್ ಕಂಬಗಳು ಹಾಗೂ ದೊಡ್ಡ ಮರಗಳು ನೆಲಕ್ಕುರುಳಿತು. ಇದರಿಂದ ಗ್ರಾಮವೂ ಸೇರಿದಂತೆ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿತ್ತು. ಪಟ್ಟಣದ ಹಲವು ಬೀದಿಗಳ ಚರಂಡಿ ಹೂಳೆತ್ತದ ಪರಿಣಾಮ ಕಲುಷಿತ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿತ್ತು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ರಸ್ತೆಯಲ್ಲೇ ನಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.