ಜಿಲ್ಲೆ

ಗಾಳಿ, ಮಳೆಗೆ ರಸ್ತೆಗೆ ಉರುಳಿದ ಮರ

ಪ್ರಸಿನ್ ಕೆ.ಆರ್

ಸಿದ್ದಾಪುರ: ಸಿದ್ದಾಪುರದ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು ಸಹಿತ ಭಾರಿ ಗಾಳಿ ಸುರಿಯಿತು.

ಮಳೆ, ಗಾಳಿಯಿಂದಾಗಿ ಸಿದ್ದಾಪುರ, ಅಮ್ಮತ್ತಿ, ವಿರಾಜಪೇಟೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ಮರಬಿದ್ದು, ಒಂದು ಗಂಟೆಗೂ ಹೆಚ್ಚಿನ ಸಮಯ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಸ್ಥಳೀಯರು ಹಾಗೂ ತೋಟದ ಕಾರ್ಮಿಕರು ಸೇರಿ ಮರ ತೆರವುಗೊಳಿಸಿದರು.