ಸಿಂದಗಿ ಪಟ್ಟಣದ ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಸ್ಪತ್ರೆ ಮನೋವೈದ್ಯ ಡಾ.ಮಂಜುನಾಥ ಮಸಳಿ ಚಾಲನೆ ನೀಡಿದರು. ಾದರ್​ ಸಂತೋಷ, ಸಿಂಥಿಯಾ ಡಿ.ಮೆಲ್ಲೋ, ಎಸ್​.ಡಿ.ಕುಲಕರ್ಣಿ ಇದ್ದರು. 
ಜಿಲ್ಲೆ

ಮಾನಸಿಕ ಖಿನ್ನತೆ ನಿವಾರಣೆಗೆ ಚಿಕಿತ್ಸೆ ಅವಶ್ಯ

ಗಿರೀಶ ಸಗರ

ಸಿಂದಗಿ: ಮಾನಸಿಕ ಖಿನ್ನತೆಯ ಪರಿಣಾಮದಿಂದಲೇ ಅತೀ ಹೆಚ್ಚು ಆತ್ಮಹತ್ಯೆಗಳಂತಹ ದುರ್ಟನೆಗಳು ನಡೆಯುತ್ತವೆ ಎಂದು ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಮಂಜುನಾಥ ಮಸಳಿ ಹೇಳಿದರು.

ಪಟ್ಟಣದ ಬಸವ ನಗರದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ಜಿಲ್ಲಾ ಮನೋರೋಗ ವಿಭಾಗ ಹಾಗೂ ತಾಲೂಕು ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆತ್ಮಹತ್ಯೆ ಮಾಡಿಕೊಂಡವರ ಸಾಲಿನಲ್ಲಿ ಹೆಚ್ಚು ಪ್ರಯತ್ನಶಿಲರು, ಸ್ವ&ಉದ್ಯೋಗಿಗಳು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ.

ಮ್ಮ ಸಾವು ಯಾರಿಗೂ ನೆಮ್ಮದಿ ತರುವುದಿಲ್ಲ, ಆದರೆ ನಮ್ಮನ್ನು ನಂಬಿದವರನ್ನು ಕಷ್ಟಕ್ಕೆ ತಳ್ಳುತ್ತದೆ. ಇದಕ್ಕೆ ಪರಿಹಾರವೆಂದರೆ ಸಾಕಷ್ಟು ತಾಳ್ಮೆ ವಹಿಸುವುದು. ಭವಿಷ್ಯದ ಕುರಿತು ಉತ್ತಮ ಆಲೋಚನೆ ಮಾಡುವುದು. ಆತಂಕ, ಭಯ ಇದ್ದರೆ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದರು.

ಆಸ್ಪತ್ರೆ ಅಥವಾ ವೈದ್ಯರ ಬಳಿ ಹೋಗಲು ಮುಜುಗರವಾದರೆ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಸಹಾಯವಾಣಿ 14416ಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿ, ಸೂಕ್ತ ಚಿಕಿತ್ಸೆ ಪಡೆಯಬಹುದು. ಸಿಂದಗಿ ಭಾಗದ ಜನರಿಗಾಗಿ ಪ್ರತಿ ತಿಂಗಳಿನ ಮೊದಲ ಮಂಗಳವಾರ ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮನೋವೈದ್ಯರು ಇರುತ್ತಾರೆ. ಚಿಕಿತ್ಸೆಗೆ ಯಾವುದೇ ವೆಚ್ಚವಿರುವುದಿಲ್ಲ ಎಂದರು.

ಸಂಗಮ ಸಂಸ್ಥೆಯ ನಿರ್ದೇಶಕ ಾದರ್​ ಸಂತೋಷ, ಸಹನಿರ್ದೇಶಕಿ ಸಿಸ್ಟರ್​ ಸಿಂಥಿಯಾ ಡಿ.ಮೆಲ್ಲೊ, ತಾಲೂಕು ಆರೋಗ್ಯ ಶಿಣಾಧಿಕಾರಿ ಎಸ್​.ಡಿ.ಕುಲಕರ್ಣಿ ಮಾತನಾಡಿ, ಸಮಾಧಾನ ಮತ್ತು ಮುಕ್ತ ಚರ್ಚೆಗಳೇ ಸಾವು ಮತ್ತು ಖಿನ್ನತೆಯನ್ನು ದೂರ ಮಾಡುವ ಔಷಧಗಳಾಗಿವೆ ಎಂದರು.

ವಿವಿಧ ಹಳ್ಳಿಗಳಿಂದ ಮಹಿಳೆಯರು, ಯುವಕರು, ಕಟ್ಟಡ ಕಾರ್ಮಿಕರು, ಅಂಗವಿಕಲರು ಮತ್ತು ಸಂಗಮ ಸಂಸ್ಥೆಯ ಕಾರ್ಯಕರ್ತರಿದ್ದರು. ಬಸವರಾಜ ಬಿಸನಾಳ ನಿರೂಪಿಸಿದರು. ಉಮೇಶ ದೊಡಮನಿ ಸ್ವಾಗತಿಸಿದರು. ಮಲಕಪ್ಪ ಹಲಗಿ ವಂದಿಸಿದರು.