ಜಿಲ್ಲೆ

ಚಿಕಿತ್ಸಾ ಶಿಬಿರ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಭೌತಿಕ ದಿನದ ಪ್ರಯುಕ್ತ ಎಸ್​ಡಿಎಂ ಭೌತಿಕ ಚಿಕಿತ್ಸಾ ಸಂಸ್ಥೆ ವತಿಯಿಂದ ಸೆ. 5ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಉಚಿತ ಭೌತಿಕ ಚಿಕಿತ್ಸಾ ಮತ್ತು ಸಲಹಾ ಶಿಬಿರವನ್ನು ಹುಬ್ಬಳ್ಳಿ ವಿದ್ಯಾನಗರದ ಎಸ್​ಡಿಎಂ ಪಾಲಿ ಕ್ಲಿನಿಕ್​ನಲ್ಲಿ ಆಯೋಜಿಸಿದ್ದಾರೆ.
ಬೆನ್ನು ನೋವು, ಮೂಳೆ ಮತ್ತು ನರಗಳ ಸಂಬಂಧಿತ, ಬೆನ್ನು ಹುರಿ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಮಾಡಬೇಕಾದ ಮತ್ತು ಸಮಸ್ಯೆಗಳಿದ್ದವರು ಮಾಡಬಾರದ ವಿಚಾರಗಳನ್ನು ತಜ್ಞ ಭೌತಿಕ ಚಿಕಿತ್ಸಕರಿಂದ ಚಿಕಿತ್ಸೆ, ಸಲಹೆ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.