ಕರೊನಾ ಗೆದ್ದ ಶತಾಯುಷಿ ಹಾಲಮ್ಮಗೆ ಹೂವಿನಹಡಗಲಿ ತಾಲೂಕು ಆಡಳಿತದಿಂದ ಶುಕ್ರವಾರ ಸನ್ಮಾನಿಸಲಾಯಿತು. 
ಜಿಲ್ಲೆ

ಮನೆಯಲ್ಲೇ ಚಿಕಿತ್ಸೆ ಪಡೆದು ಕರೊನಾ ಗೆದ್ದ ಹೂವಿನಹಡಗಲಿಯ ಶತಾಯುಷಿ ಹಾಲಮ್ಮ

ಹೂವಿನಹಡಗಲಿ: ಪಟ್ಟಣದ ಎಂಟನೇ ವಾರ್ಡ್‌ನ ಶತಾಯುಷಿ ಹಾಲಮ್ಮ, ಕರೊನಾದಿಂದ ಚೇತರಿಕೆಯಾಗಿದ್ದಾರೆ. ಎಸ್‌ಬಿಐ ಉದ್ಯೋಗಿದ್ದ ವೃದ್ಧೆಯ ಪುತ್ರನಿಗೆ ಜೂ.3 ರಂದು ಸೋಂಕು ದೃಢಪಟ್ಟಿತ್ತು. ಪುತ್ರನ ಸಂಪರ್ಕಕ್ಕೆ ಬಂದಿದ್ದರಿಂದ ಹಾಲಮ್ಮಗೂ ಜೂ.10 ರಂದು ವೈರಸ್ ತಗುಲಿತ್ತು. ಹೀಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ, ಮನೆಯಲ್ಲಿಯೇ ಅಗತ್ಯ ಚಿಕಿತ್ಸೆ ನೀಡಿದ್ದು, ಚೇತರಿಕೆಯಾಗಿದ್ದಾರೆ ಎಂದು ವೈದ್ಯರಾದ ಉಮೇಶ, ಶಿವಕುಮಾರ್, ನಿಖಿಲ್ ತಿಳಿಸಿದ್ದಾರೆ.

‘ಕರೊನಾ ಗೆದ್ದ ಹಾಲಮ್ಮ ನಮಗೆಲ್ಲ ಸ್ಫೂರ್ತಿ. ವೈರಾಣು ಬಗ್ಗೆ ಭಯ ಪಡುವುದಕ್ಕಿಂತ ಜಾಗೃತಿ ವಹಿಸುವುದು ಮುಖ್ಯ’ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ್ ತಿಳಿಸಿದ್ದಾರೆ. ಹಾಲಮ್ಮರನ್ನು ತಾಲೂಕಾಡಳಿತದಿಂದ ಶುಕ್ರವಾರ ಸನ್ಮಾನಿಸಲಾಯಿತು. ತಾಪಂ ಇಒ ಸೋಮಶೇಖರ್, ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ ಇತರರು ಇದ್ದರು.