ಹೊಸಕೋಟೆ ತಾಲೂಕಿನ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ 59 ಕೆರೆಗೆ ಹೊರಮಾವು ಭಾಗದಿಂದ ನೀರು ಹರಿಸಲು ಸಚಿವ ಸಂಪುಟದಲ್ಲಿ 140 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ ಶಾಸಕ ಶರತ್​ ಬಚ್ಚೇಗೌಡ ಗೌರವಿಸಿದರು. 
ಜಿಲ್ಲೆ

59 ಕೆರೆಗಳಿಗೆ ಸಂಸ್ಕರಿಸಿದ ಕೆರೆ ನೀರು

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ: ತಾಲೂಕಿನ ನಂದಗುಡಿ, ಸೂಲಿಬೆಲೆ ಹೋಬಳಿಯ 59 ಕೆರೆಗಳಿಗೆ ಎಚ್​.ಎನ್​. ವ್ಯಾಲಿ ಯೋಜನೆಯಡಿ ಹೊರಮಾವು ಕೆರೆಯಿಂದ ನೀರು 45 ಎಂಎಲ್​ಡಿ ಸಂಸ್ಕರಣ ನೀರು ಹರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ನಂದಗುಡಿ ಹಾಗೂ ಸುಲಿಬೆಲೆ ಹೋಬಳಿ ಭಾಗದಲ್ಲಿ 1500 ಅಡಿ ಬೋರ್​ವೆಲ್​ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಇದ್ದು, ಅಂತರ್ಜಲ ಹೆಚ್ಚಿಸಲು ನೀರಾವರಿ ಯೋಜನೆ ಮಾಡುವುದೊಂದೇ ದಾರಿಯಾಗಿತ್ತು. ಈ ಸಂಬಂಧ ಶಾಸಕ ಶರತ್​ ಬಚ್ಚೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಬೆಂಗಳೂರಿನ ಹೊರಮಾವು ಕೆರೆಯ 45 ಎಂಎಲ್​ಡಿ ನೀರನ್ನು ಹರಿಸಲು ಮನವಿ ಮಾಡಿದ್ದರು. ಸಂಪುಟ ಸಭೆದಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದು, 140 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡುವಂತೆ ಒಪ್ಪಿಗೆ ನೀಡಲಾಗಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದ್ದಾರೆ.