ಜಿಲ್ಲೆ

ಮಹಿಳೆಯನ್ನು ಗೌರವದಿಂದ ಕಾಣಿರಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಂಡ ಹೆಂಡಿರ ಜಗಳದಲ್ಲಿ ಪ್ರಜಾಪ್ರಭುತ್ವ ಅಡಗಿದೆ. ಹೆಣ್ಣು ಮಕ್ಕಳನ್ನು ನಾವು ಗೌರವದಿಂದ ಕಾಣಬೇಕು. ಇಂದು ತಂದೆ-ತಾಯಿಗಳ ಬಗ್ಗೆ ಗೌರವ ಕ್ಷೀಣಿಸುತ್ತಿದೆ ಎಂದು ಸಾಹಿತಿ ರಂಜಾನ ದರ್ಗಾ ವಿಷಾದ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಲಲಿತಾ ಮತ್ತು ಪ್ರೊ. ಸಿ.ವಿ. ಕೆರಿಮನಿ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಹಿತ್ಯ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕಾದಂಬರಿಕಾರ ಯ.ರು. ಪಾಟೀಲ ಸ್ವಾತಂತ್ರ್ಯ ಚಳವಳಿ ಹಾಗೂ ಕನ್ನಡತಿಯರು ಕುರಿತು ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಕನ್ನಡದ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದು, ಮಹಿಳೆ ಚಳವಳಿ, ಕುಟುಂಬ ನಿರ್ವಹಣೆ ಜತೆಗೆ ಸೆರೆಮನೆ ವಾಸ ಅನುಭವಿಸಿದ್ದರೂ ಈ ಬಗ್ಗೆ ದಾಖಲೆ ವಿರಳವಾಗಿವೆ ಎಂದರು.

ಸುನಂದಾ ಕಡಮೆ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಕಡಮೆ ಮತ್ತು ಸುನಂದಾ ಕಡಮೆ ದಂಪತಿಗೆ ಸಾಹಿತ್ಯ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲಲಿತಾ ಕೆರಿಮನಿ, ಸಂಪದಾ ಕೆರಿಮನಿ, ವೀರಣ್ಣ ಒಡ್ಡೀನ, ಡಾ. ಲಿಂಗರಾಜ ಅಂಗಡಿ, ಅರುಣಕುಮಾರ ಹಬ್ಬು, ಎಸ್​.ಜಿ. ಪಾಟೀಲ, ಮಲ್ಲಣ್ಣ ಗುಡಿಗೇರಿ, ಸುಲೋಚನಾ ಮಾಲಿಪಾಟೀಲ, ನಿರ್ಮಲಾ ಶೆಟ್ಟರ, ಮುಕ್ತಾ ಸವದಿ, ಗೀತಾ ಕುಂಬಿ, ಎಸ್​.ವಿ. ಕಮ್ಮಾರ, ಪಾರ್ವತಿ ಹಾಲಭಾವಿ, ಸೋಮಶೇಖರ ಕೆರಿಮನಿ, ಬಸವಾಜ ಹುಕ್ಕೇರಿ, ಇತರರು ಇದ್ದರು.

ಶಂಕರ ಹಲಗತ್ತಿ ಸ್ವಾಗತಿಸಿದರು. ವಿ.ಜಿ. ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.