ತೋರಣಗಲ್ ಸಿಎಚ್‌ಸಿಯ ಜೈವಿಕ ತ್ಯಾಜ್ಯ ಕೊಠಡಿಗೆ ಡಿಎಚ್‌ಒ ಎಚ್.ಎಲ್.ಜನಾರ್ದನ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ನಿವೃತ್ತ ಟಿಎಚ್‌ಒ ಡಾ.ಗೋಪಾಲ್ ರಾವ್, ಡಾ.ರಜಿಯಾ ಬೇಗಂ, ಸೂಪರಿಂಟೆಂಡೆಂಟ್ ಹಷರ್, ಪ್ರಶಾಂತ, ಅನ್ಸಾರಿ ಇತರರಿದ್ದರು. 
ಜಿಲ್ಲೆ

ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ: ಡಿಎಚ್‌ಒ ಎಚ್.ಎಲ್.ಜನಾರ್ದನ್ ಸೂಚನೆ

Gangavati - Desk - Veeresh S Ullagaddi

ಸಂಡೂರು: ಆಸ್ಪತ್ರೆಗೆ ಬರುವ ರೋಗಿಗಳು, ಸಂಬಂಧಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಡಿಎಚ್‌ಒ ಎಚ್.ಎಲ್.ಜನಾರ್ದನ್ ತಿಳಿಸಿದರು.


ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಔಷಧ ದಾಸ್ತಾನು ಪರಿಶೀಲನೆ ನಡೆಸಿ ಮಾತನಾಡಿದರು. ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುತ್ತದೆ. ಅಗತ್ಯಕ್ಕೆ ತಕ್ಕಂತೆ ವಿವಿಧ ಔಷಧಗಳ ದಾಸ್ತಾನು ಇಟ್ಟುಕೊಳ್ಳಬೇಕು. ರಾತ್ರಿ ಪಾಳಿಯಲ್ಲೂ ರೋಗಿಗಳು ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡುವಂತೆ ಸೂಚಿಸಿದರು.


ಗ್ರಾಮಗಳಲ್ಲಿ ಕುಡಿವ ನೀರಿನ ಪೈಪ್ ಒಡೆದು ಕೊಳಚೆ ಸೇರಿ ಕಲುಷಿತವಾಗಬಹುದು. ಮೂಲ ನೀರಿನ ಮತ್ತು ಪಾಯಿಂಟ್‌ಗಳ ಮಾದರಿ ಸಂಗ್ರಹಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಕುಡಿಯಲು ಯೋಗ್ಯವಿಲ್ಲದಿದ್ದರೆ ಗ್ರಾಪಂ ಕ್ರಮವಹಿಸಲು ಸೂಚಿಸಬೇಕು. ಸೊಳ್ಳೆಗಳ ಉತ್ಪತ್ತಿಗೆ ವಾತಾವರಣ ಪೂರಕವಾಗಿದೆ.

ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಡೆಂಘೆ, ಚಿಕೂನ್ ಗುನ್ಯಾ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು. ಸಿಬ್ಬಂದಿ ಮಂಜುನಾಥ, ಶಕೀಲ್, ಲಕ್ಷ್ಮೀ, ರೂಪಾ, ವೆಂಕಟೇಶ, ಶಶಿಧರ, ಶ್ರೀರಾಮುಲು, ಶಿವಕುಮಾರ, ಸಿದ್ದೇಶ ಇತರರಿದ್ದರು.