ಅಳವಂಡಿ: ಶೈಕ್ಷಣಿಕ ಪ್ರವಾಸ ಮಕ್ಕಳ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗಲಿದೆ. ಪಠ್ಯದ ವಿಷಯಗಳನ್ನು ಖುದ್ದು ವೀಕ್ಷಣೆ ಮಾಡುವುದರಿಂದ ಅಭ್ಯಾಸ ಮನವರಿಕೆಯಾಗುತ್ತದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಚಿಕ್ಕಣ್ಣವರ ಹೇಳಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಜಿಪಂ ಕೊಪ್ಪಳ, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ವತಿಯಿಂದ ಮಾದರಿ ಶಾಲಾ ಭೇಟಿ ಕಾರ್ಯಕ್ರಮದ ಅಂಗವಾಗಿ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಹೊಸ ಆಯಾಮ: ಸೆಪ್ಟೆಂಬರ್ ಅಂತ್ಯಕ್ಕೆ ನೂತನ ನೀತಿ ಜಾರಿ; ಸಚಿವ ಎಚ್.ಕೆ. ಪಾಟೀಲ ಘೋಷಣೆ
ನಾಲ್ಕು ಗೋಡೆಯ ಮಧ್ಯ ಪಾಠ ಕೇಳಿದ ಮಕ್ಕಳಿಗೆ ಪ್ರವಾಸ ನೂತನ ಅನುಭವ ನೀಡಲಿದೆ. ಮನಸ್ಸಿನ ಗೊಂದಲ ದೂರಮಾಡಿ ಉತ್ಸಾಹ ಹೆಚ್ಚಿಸುತ್ತದೆ. ಪ್ರಾಯೋಗಿಕ ಜ್ಞಾನವು ಸೈದ್ದಾಂತಿಕಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.
ಎಸ್ಡಿಎಂಸಿ ಉಪಾಧ್ಯಕ್ಷ ನಾಗರಾಜ ಪೂಜಾರ ಮಾತನಾಡಿ, ಮಕ್ಕಳಿಗೆ ಶೈಕ್ಷಣಿಕ ಪ್ರವಾಸದಿಂದ ಓದಿನಲ್ಲಿ ಆಸಕ್ತಿ ಹೆಚ್ಚಳವಾಗುತ್ತದೆ. ವಿವಿಧ ಭಾಷೆ, ಜನರ ನಾಗರಿಕತೆ ಪರಿಚಯದ ಅವಕಾಶ ನೀಡುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ, ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ, ಶಿಕ್ಷಕರಾದ ಹಂಪವ್ವ ಪೂಜಾರ, ಮಹಾಲಕ್ಷ್ಮೀ, ರೇಣುಕಾ, ರೇಣವ್ವ ಪ್ರಮುಖರಾದ ಮುತ್ತಪ್ಪ ಮುದ್ದಾಬಳ್ಳಿ, ನಾಗಪ್ಪ ಮುದ್ದಾಬಳ್ಳಿ, ನಾಗಪ್ಪ ಮುದ್ದಾಬಳ್ಳಿ, ಪರಸಪ್ಪ ಪೂಜಾರ ಇದ್ದರು.