ಜಿಲ್ಲೆ

ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಪ್ರಯಾಣ

Hassan

ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಭಾಗದ ನೂರಾರು ಭಕ್ತರು ಸೋಮವಾರ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳಿದರು.

ಶಿವರಾತ್ರಿ ಹಬ್ಬದ ಪ್ರಯುಕ್ತ ಕೇರಳಾಪುರ, ಕರ್ತಾಳು, ಬಸವನಹಳ್ಳಿ, ಹೊನ್ನೇನಹಳ್ಳಿ, ಬಸವಾಪಟ್ಟಣ ಭಾಗದ ಭಕ್ತರು ಮುಂಜಾನೆ ಪಾದಯಾತ್ರೆ ಬೆಳೆಸಿದರು.

ಬಸವಾಪಟ್ಟಣದಲ್ಲಿ ಕುರುಹಿನ ಶೆಟ್ಟಿ ಸಮಾಜದ ಮುಖಂಡ ಗೋವಿಂದ ರಾಜು ಪಾದಯಾತ್ರಿಗಳಿಗೆ ಟೀ, ಕಾಫಿ, ಬಿಸ್ಕೆಟ್ ವ್ಯವಸ್ಥೆ ಏರ್ಪಡಿಸಿದ್ದರು.

ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿ ಆಗಮಿಸಿದ ಭಕ್ತರಿಗೆ ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಕುಡಿಯುವ ನೀರು ಮತ್ತು ಮೊಸರು ವಿತರಿಸಿದರು.
ರಾಜಸ್ವ ನಿರೀಕ್ಷ ಸಿ. ಸ್ವಾಮಿ, ಉಪ ತಹಸೀಲ್ದಾರ್ ಜಿ.ಸಿ.ಚಂದ್ರು, ಗ್ರಾಮ ಲೆಕ್ಕಿಗರು ಹಾಗೂ ನಾಡಕಚೇರಿ ಸಿಬ್ಬಂದಿ ಹಾಜರಿದ್ದು ಸಹಕರಿಸಿದರು.