ಜಿಲ್ಲೆ

ಮತ್ತೆ ಬಂದ ಒಂಟಿ ಸಲಗ...

ಗಂಗಾಧರ ಬಿ ವಿ

* ಸೆರೆ ಹಿಡಿದ ಆನೆ ಮತ್ತೆ ವಾಪಸ್

* ಜನರಿಗೂ ಹೆದರುತ್ತಿಲ್ಲ, ಅರಣ್ಯ ಇಲಾಖೆ ಕಾರ್ಯಾಚರಣೆಗೂ ಬಗ್ಗುತ್ತಿಲ್ಲ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಸೆರೆ ಹಿಡಿದು ಕಾಡಿಗಟ್ಟಿದ್ದ ಒಂಟಿ ಸಲಗ ಪುನಃ ಬಂದಿಯಂತೆ... ರೈಲ್ವೆ ಬ್ಯಾರಿಕೇಡ್ ಹಾಕಿದರೂ ಅವು ಜಗ್ಗಲ್ಲ... ಈ ಆನೆ ದಾಳಿಯಿಂದ ಬೆಳೆ ಹಾನಿ ತಪ್ಪುತ್ತಿಲ್ಲ. ಈ ಸಮಸ್ಯೆಗೆ ಕೊನೇ ಎಂದೋ...

ಇದು. ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ಹಂದಿಗೊಂದಿ ಅರಣ್ಯದಲ್ಲಿಂಚಿನ ಗ್ರಾಮಗಳ ಜನರ ಅಳಲು.

ಈ ಮೂರು ಅರಣ್ಯ ಪ್ರದೇಶಗಳಲ್ಲಿ ಆನೆಗಳ ಹಿಂಡು ದಾಳಿ ಸಾಮಾನ್ಯ ಎಂಬಂತಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಸ್ವ-ಸ್ಥಾನಕ್ಕೆ ಅಟ್ಟಿದ್ದರು.ಆದರೆ, ಮೂರು ಅರಣ್ಯ ಪ್ರದೇಶದಲ್ಲಿ ತಲಾ ಒಂದರಂತೆ ಒಂಟಿ ಆನೆಗಳು ವಾಪಸ್ ಬಂದು ಉಪಟಳ ನೀಡುತ್ತಾ ರಸ್ತೆ ರಸ್ತೆಗಳಲ್ಲೇ ಓಡಾಡಿ ಅರಣ್ಯ ಇಲಾಖೆ ಮತ್ತು ಚನ್ನಪಟ್ಟಣ, ಕನಕಪುರ, ರಾಮನಗರ ತಾಲೂಕಿನ ರೈತರನ್ನು ಇನ್ನಿಲ್ಲಂದಂತೆ ಕಾಡುತ್ತಿವೆ.

ಅರಣ್ಯ ಇಲಾಖೆ ಪ್ರತಿದಿನ ಗುಂಪು ಗುಂಪು ಆನೆಗಳನ್ನು ಸ್ವ-ಸ್ಥಾನಕ್ಕೆ ಅಟ್ಟುವ ಕೆಲಸ ಮಾಡುತ್ತಿದೆ. ಆದರೆ, ಮೂರು ಅರಣ್ಯ ಪ್ರದೇಶದ ಒಂಟಿ ಆನೆ ಹೋದಂತೆ ಪುನಃ ವಾಪಸ್ ಬರುತ್ತಿದ್ದು, ಶಾಶ್ವತವಾಗಿ ಸ್ವ- ಸ್ಥಾನಕ್ಕೆ ಅಟ್ಟಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಕಾರ್ಯಾರಣೆ ನಡೆಸಿ ಅರಣ್ಯಕ್ಕೆ ಬಿಡುವ ಬದಲು ಸಾಕಾನೆಗಳ ಮೂಲ ಸೆರೆಹಿಡಿದು ಆನೆ ಶಿಬಿರಗಳಿಗೆ ಬೀಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಲ ನೀಡದು. ಒಂಟಿ ಆನೆಗಳನ್ನು ಸಾಕಾನೆಗಳ ಮೂಲಕ ಹಿಡಿದು ಆನೆ ಶಿಬಿರಗಳಲ್ಲಿ ಇಟ್ಟರೆ ಮಾತ್ರ ಈ ‘ಾಗದಲ್ಲಿ ಆನೆಗಳ ಉಪಟಳಕ್ಕೆ ನಿಯಂತ್ರಣ ಸಾ‘್ಯ. ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಹಿಡಿದು ಶಿಬಿರಗಳಿಗೆ ಸಾಗಿಸಬೇಕು.

ಆರ್. ಮೂರ್ತಿನಾಯಕ್, ಗ್ರಾಪಂ ಸದಸ್ಯ, ಬನ್ನಿಕುಪ್ಪೆ

ಅರಣ್ಯ ಇಲಾಖೆ ನಿರಂತರವಾಗಿ ಆನೆಗಳ ಕಾರ್ಯಾಚರಣೆಯಲ್ಲಿ ತೊಡಗಿದೆ. ಅರಣ್ಯಕ್ಕೆ ಬಂದ ಆನೆಗಳ ಚಲನ ವಲನ ಗಮನಿಸುತ್ತಾ ನಿಗಾವಹಿಸಿದೆ. ಒಂಟಿ ಆನೆಗಳ ನಿಯಂತ್ರಣಕ್ಕೆ ಈಗಾಗಲೇ ನುರಿತ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಿ ಅವುಗಳ ಸ್ವಸ್ಥಾನಕ್ಕೆ ಅಟ್ಟುವ ಕೆಲಸ ಮಾಡಲಾಗುತ್ತಿದೆ.

ಎಂ. ರಾಮಕೃಷ್ಣಪ್ಪ, ಡಿಸಿಎಫ್ , ರಾಮನಗರ.