ಧಾರವಾಡ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳ ವಿಸರ್ಜನೆಗೆ ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ವಾಹನಗಳ ವ್ಯವಸ್ಥೆ ಮಾಡಿದೆ.
ಧಾರವಾಡ ನಗರದಲ್ಲಿ ಸೆ. 23ರಂದು ಸಂಜೆ 5.30ರಿಂದ ರಾತ್ರಿ 9.30ರವರೆಗೆ ಗಾಂಧಿನಗರ, ಮಾಳಮಡ್ಡಿ, ರಾಯರಮಠ ಹಾಗೂ ಹೊಸಯಲ್ಲಾಪುರ ಪ್ರದೇಶ, ಶ್ರೀನಗರ, ಸಪ್ತಾಪುರ ಹಾಗೂ ಜಯನಗರಪ್ರದೇಶಗಳಲ್ಲಿ ಸಂಚಾರಿ ವಾಹನ ಸಂಚರಿಸಲಿವೆ.
ಹುಬ್ಬಳ್ಳಿ ನಗರದಲ್ಲಿ ಸೆ. 23ರಂದು ಸಂಜೆ 5.30ರಿಂದ ರಾತ್ರಿ 9.30ರವರೆಗೆ ವಿದ್ಯಾನಗರ, ಶಿರೂರ ಪಾರ್ಕ್ ಪ್ರದೇಶ, ನವನಗರ ಹಾಗೂ ಉಣಕಲ್ ಪ್ರದೇಶ, ಬೈಲಪ್ಪನವರನಗರ, ಭವಾನಿನಗರ, ದೇಶಪಾಂಡೆನಗರ ಹಾಗೂ ವಿಜಯನಗರ ಪ್ರದೇಶದಲ್ಲಿ ವಿಸರ್ಜನಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.