ಜಿಲ್ಲೆ

ಕಾಲುವೆಗೆ ಬಿದ್ದ ಸಾರಿಗೆ ಸಂಸ್ಥೆ ಬಸ್​; 13 ಜನರಿಗೆ ಗಾಯ

ರಾಣೆಬೆನ್ನೂರ: ರಾಜ್ಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್​ ಯುಟಿಪಿ ಕಾಲುವೆಗೆ ಬಿದ್ದು 13 ಜನರು ಗಾಯಗೊಂಡ ಟನೆ ಸೋಮವಾರ ತಾಲೂಕಿನ ಹಾರೋಗೊಪ್ಪ ಬಳಿ ಸಂಭವಿಸಿದೆ.
ಶಿಕಾರಿಪುರದಿಂದ ರಾಣೆಬೆನ್ನೂರಿಗೆ ಬರುತ್ತಿದ್ದ ಸಾರಿಗೆ ಬಸ್​ ಎಕ್ಸೆಲ್​ ಕಟ್​ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಂಬುಲೆನ್ಸ್​ ಮೂಲಕ ನಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.